State New:
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಕರಕುಶಲ ಪ್ರಾತ್ಯಕ್ಷಿಕೆ : ವೇದಿಕೆ ಕಾರ್ಯಕ್ರಮದ ಬಳಿಕ ಕಲಾಮಂದಿರ ಆವರಣದಲ್ಲಿ ಆಯೋಜಿಸಿದ್ದ ಕಿನ್ನಾಳ ಕಲೆ, ಕೌದಿ ಮತ್ತು ಕಸೂತಿ ಕಲೆ, ಕುಂಬಾರಿಕೆ, ಇನ್ಲೆ ಕಲೆ ಚರಕದಿಂದ ನೂಲುವಿಕೆ, ಕೈಮಗ್ಗದ ನೇಕಾರಿಕೆ, ವರ್ಲಿ ಕಲೆ, ಚನ್ನಪಟ್ಟಣ ಗೊಂಬೆ ತಯಾರಿಕೆ, ಬಿದಿರು ಬೆತ್ತದ ಬುಟ್ಟಿ ಹೆಣಿಗೆ, ಮದರಂಗಿ ಕಲೆ, ವ್ಯಂಗ್ಯ ಚಿತ್ರಕಲೆ, ಸೂಕ್ಷ್ಮ ಕಲೆ ಪ್ರದರ್ಶನ ಕರಕುಶಲ ಪ್ರಾತ್ಯಕ್ಷಿಕೆ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಳಿಗೆಗಳಿಗೆ ಭೇಟಿ ನೀಡಿ, ಚರಕದಿಂದ ತಯಾರಿಸಿದ 23 ಟವೆಲ್‌ಗಳು ಸೇರಿದಂತೆ ಗೊಂಬೆಗಳು, ಮಣ್ಣಿನ ದೀಪಗಳು, ಬಿದಿರಿನಿಂದ ತಯಾರಿಸಿದ ಕೀ ಬಂಚ್‌ಗಳನ್ನು ಖರೀದಿಸಿ ಸಮಿತಿಯ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗುವಂತೆ ಮಾಡಿ : ನಟ ಝೈದ್ ಖಾನ್ ಅವರಿಂದ ಸಿಎಂ ಗೆ ಮನವಿ
ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ನಾಲ್ಕನೇ ದಿನದ ಅಲಂಕಾರ…!