www.karnatakatv.net :ಗುಂಡ್ಲುಪೇಟೆ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿಯೂ ವೀರ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಅಭಿಮನ್ಯು ಜೊತೆಗೆ ಇತರೆ 8 ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ. ಇದೇ ಮೊದಲ ಬಾರಿಗೆ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಾಂಪುರ ಆನೆ ಶಿಬರದ ಎರಡು ಆನೆಗಳೂ ಕೂಡ ಆಯ್ಕೆಯಾಗಿವೆ.
ಹೌದು ರಾಂಪುರ ಆನೆ ಶಿಬಿರದ ಸಾಕಾನೆಗಳಾದ ಚೈತ್ರ ಹಾಗೂ ಲಕ್ಷ್ಮಿ ಕೂಡ ಈ ಬಾರಿ ದಸರೆಯ ಜಂಬೂ ಸವಾರಿಗೆಯಲ್ಲಿ ಹೆಜ್ಜೆ ಹಾಕಲಿವೆ.ಇದೇ ಮೊದಲ ಬಾರಿಗೆ ಶಿಬಿರದ ಎರಡು ಆನೆಗಳು ಆಯ್ಕೆಯಾಗಿರೋ ಹಿನ್ನೆಲೆಯಲ್ಲಿ ಬಂಡೀಪುರದಿಂದ ಗಜಪಯಣವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹುಲಿ ಯೋಜನೆ ನಿರ್ದೇಶಕ ಹಾಗೂ ಅರಣ್ಯಾಧಿಕಾರಿ ಎಸ್.ಆರ್ ನಟೇಶ್ ಮಾಹಿತಿ ನೀಡಿದ್ರು.
ಪ್ರತಿ ವರ್ಷ ನಾಗರಹೊಳೆ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಗಜಪಯಣ ನಡೆಯುತ್ತಿತ್ತು ಆದ್ರೆ ಈ ಬಾರಿ ಬಂಡೀಪುರದ ಚೈತ್ರ ಮತ್ತು ಲಕ್ಷ್ಮಿ ಆಯ್ಕೆಯಾಗಿರೋದ್ರಿಂದ ಬಂಡೀಪುರ ವ್ಯಾಪ್ತಿಯ ಮದ್ದೂರು ವಲಯಾರಣ್ಯಾಧಿಕಾರಿ ಕಛೇರಿಯಿಂದ ಗಜ ಪಯಣ ಹಮ್ಮಿಕೊಳ್ಳಲಾಗಿದೆ. ಸೆಪ್ಟಂಬರ್ 11 ರಂದು ಸಂಜೆ 4 ಗಂಟೆಗೆ ಎರಡೂ ಆನೆಗಳಿಗೆ ಅಲಂಕಾರ ಮಾಡಿ ಗಜ ಪಯಣಕ್ಕೆ ಕಳಹಿಸಿಕೊಡಲಾಗುತ್ತೆ.
ಸೆ.16ರಂದು ಅಂಬಾವಿಲಾಸ ಅರಮನೆಗೆ ಆನೆಗಳು ಆಗಮಿಸಲಿದ್ದು, ತನ್ನ ತಂಡದೊಂದಿಗೆ ನಾಯಕ ಅಭಿಮನ್ಯು ಕೂಡ ಆಗಮಿಸಲಿದ್ದಾನೆ. ಒಟ್ಟು 8 ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರಿಸಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಜಂಬೂಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಲಿದೆ.
ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ