ಮಂಡ್ಯ ಜಿಲ್ಲೆಯ ಮದ್ದೂರು ಬಳಿಕ ದಾವಣಗೆರೆಯಲ್ಲೂ ಕಲ್ಲು ತೂರಾಟ ಮಾಡಲಾಗಿದೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹಿಂದೂ ಸಮುದಾಯದ ಮನೆಗಳ ಮೇಲೆ, ಅನ್ಯಕೋಮಿನ ಗುಂಪೊಂದು ಕಲ್ಲು ತೂರಿದೆ. ಅನ್ಯಕೋಮಿನ ಫ್ಲೆಕ್ಸ್ ಬೋರ್ಡ್ ಹಾಕಿದ್ದ ವಿಚಾರವಾಗಿ ಗಲಾಟೆ ಶುರುವಾಗಿತ್ತು.
ಸೆಪ್ಟೆಂಬರ್ 24ರಂದು ಯಮನೂರಪ್ಪ ಎಂಬುವರ ಮನೆ ಎದುರು, ಅನ್ಯಧರ್ಮಿಯರು ಐ ಲವ್ ಮೊಹಮ್ಮದ್ ಎಂಬ ಫ್ಲೆಕ್ಸ್ ಹಾಕಿದ್ದಾರೆ. ಇದನ್ನು ಆಕ್ಷೇಪಿಸಿದ್ದ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಿದ್ದು, ಎಲ್ಲರೂ ಮಲಗಿದ್ದ ವೇಳೆ ಕಲ್ಲು ತೂರಾಟ ಮಾಡಿದ್ದಾರೆ.
ಕೆಲವರ ಮನೆಗಳಿಗೇ ನುಗ್ಗಿ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿ ಬಂದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ವೇಳೆ ಪೊಲೀಸರು ಸ್ಥಳದಲ್ಲೇ ಇದ್ರೂ ಏನೂ ಮಾಡದೆ ಸೈಲೆಂಟ್ ಆಗಿದ್ದರೆಂದು ಆರೋಪಿಸಲಾಗಿದೆ.
ಸದ್ಯ, ದಾವಣಗೆರೆಯಲ್ಲಿ ಫ್ಲೆಕ್ಸ್ ಕಿಡಿ ಹೊತ್ತಿಕೊಂಡಿದ್ದು, ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಫ್ಲೆಕ್ಸ್ ತೆರವು ಮಾಡಲಾಗಿದೆ. ಬ್ಯಾನರ್ ವಿಚಾರಕ್ಕೆ ಎರಡು ಕೋಮಿನ ಮಧ್ಯೆ ಗಲಾಟೆ ಆಗಿದೆ. ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ರಂಗನಾಥ್ ಎಂಬುವರ ದೂರಿನ ಆಧಾರದ ಮೇಲೆ, 28 ಜನರ ಹೆಸರು ಸಮೇತ, 40ರಿಂದ 50 ಜನರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಮತ್ತೊಂದು ಕಡೆ ಅನ್ಯಕೋಮಿನ ಕಡೆಯಿಂದ
6 ಜನರ ವಿರುದ್ಧ ದೂರನ್ನು ದಾಖಲಿಸಲಾಗಿದೆ.