Hassan News: ಹಾಸನ: ಜಾವಗಲ್ ಎಪಿಎಂಸಿ ಆವರಣದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ. ರೈತರನ್ನು ಅಸಹಾಯಕರನ್ನಾಗಿ ಮಾಡಿ ಅಟ್ಟಹಾಸ ಮೆರೆಯುತ್ತ ರಾಜಾರೋಷವಾಗಿ ದಂಧೆ ನಡೆಸುತ್ತಿರುವ ಭ್ರಷ್ಟ ನಫೆಡ್ ಅಧಿಕಾರಿಗಳು. ಕಳಪೆ ಕೊಬ್ಬರಿ ಎಂದು ಹೆದರಿಸಿ ರೈತನಿಂದ 22 ಸಾವಿರ ವಸೂಲಿ ಮಾಡಿದ ಖದೀಮರು. 5 ಸಾವಿರ ನಗದು ರೂಪದಲ್ಲಿ ಹಾಗೂ 16 ಸಾವಿರ ಫೋನ್ ಪೇ ಮೂಲಕ ಒಬ್ಬ ರೈತನಿಂದ ವಸೂಲಿ ಮಾಡಿದ್ದಾರೆ. ಇವರು ಕೇಳಿದಷ್ಟು ಹಣ ಕೊಟ್ಟರೆ ಕೊಬ್ಬರಿಯ ಗುಣಮಟ್ಟ ಚೆನ್ನಾಗಿರುತ್ತೆ ಇಲ್ಲವಾದಲ್ಲಿ ಕೊಬ್ಬರಿ ಹಸಿಯಾಗಿದೆ, ಸಣ್ಣ ಇದೆ, ಓಳು ಇದುವೇ ಎಂದು ನಾನಾ ರೀತಿಯಲ್ಲಿ ರೈತರಿಗೆ ಹೆದರಿಸಿ ರೈತನಿಂದ ವಸೂಲಿ ಮಾಡುತ್ತಿದ್ದಾರೆ.
ಯಾರಾದರೂ ಇವರ ಅನ್ಯಾಯ ಅಕ್ರಮಗಳ ಬಗ್ಗೆ ಪ್ರೆಶ್ನೆ ಮಾಡಿದರೆ ಅವನ ಕಥೆ ಮುಗಿದೇ ಹೋಯಿತು… ಕೊಬ್ಬರಿ ಮಾರಾಟ ಮಾಡಲು ಸರದಿಯಲ್ಲಿ ನಿಂತ ರೈತರಿಗೆ ಚೀಲ ತುಂಬಬೇಕು, ಲೋಡ್ ಮಾಡ್ಬೇಕು ಜಾಗ ಇಲ್ಲ ಅಂತ ಹೇಳಿ ರೈತರನ್ನು ಕಾಯಿಸಿ ಪ್ರೆಶ್ನೆ ಮಾಡಿದವನ ವಿರುದ್ಧ ದಂಗೆಳುವಂತೆ ಮಾಡುತ್ತಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ರೈತ ಸರದಿ ಸಾಲಿನಲ್ಲಿ ನಿಂತ ರೈತರು ಮನಸೋ ಇಚ್ಛೆ ಬೈಯುವವರೆಗೆ ಖರೀದಿ ಮಾಡುವುದೇ ಇಲ್ಲ. ನಂತರದಲ್ಲಿ ಈ ರೀತಿ ಗಲಾಟೆ ದೂರು ಕೊಡುವುದು ಮಾಡಿದರೆ ಮುಂದಿನ ವರ್ಷ ಜಾವಗಲ್ ಗೆ ಕೊಬ್ಬರಿ ಖರೀದಿ ಕೇಂದ್ರ ಕೊಡುವುದೇ ಇಲ್ಲ ಎಂದು ಅಮಾಯಕ ರೈತರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು. ಈ ದಂಧೆಕೋರರು ವಸೂಲಿ ಮಾಡುವುದನ್ನು ಯಾರೂ ಕೇಳದಿದ್ದರೆ ಯಾವುದೇ ಸಮಸ್ಯೆ ಬರುವುದಿಲ್ಲ, ಧ್ವನಿ ಎತ್ತಿದರೆ ಇಲ್ಲದಿರುವ ಸಮಸ್ಯೆಗಳನ್ನೇ ಉದ್ಭವಿಸಿ ಹೊಡೆದು ಆಳುವ ನೀತಿಯನ್ನು ಸುಲಲಿತವಾಗಿ ಮಾಡುತ್ತಾರೆ.
ಬರಗಾಲದಲ್ಲಿ ತೆಂಗು ಬೆಳೆಗಾರರು ಸ್ವಲ್ಪ ಮಟ್ಟಿಗೆ ಸುಧಾರಿಸಲು ಕೊಬ್ಬರಿ ಖರೀದಿ ಕೇಂದ್ರ ತೆರೆದು ಸರ್ಕಾರ ಬೆಂಬಲ ಬೆಲೆಗೆ ಖರೀದಿಸುತ್ತಿದೆ. ಆದರೆ ಇಲ್ಲಿನ ಫೆಡರೇಷನ್ ಸಿಬ್ಬಂದಿ ರೈತರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ರೈತ ತನ್ನ ಮತ್ತು ತನ್ನ ಕುಟುಂಬದ ನಿರ್ವಹಣೆಗಾಗಿ ಬರಗಾಲದಲ್ಲಿ ಅತಂತ್ರವಾದ ವಿದ್ಯುತ್ ಸಮಸ್ಯೆಯಲ್ಲಿ ಹಗಲು ರಾತ್ರಿ ಎನ್ನದೆ ಕಷ್ಟ ಪಡುತ್ತಿದ್ದಾನೆ. ಒಂದು ಕೊಬ್ಬರಿ ಪಡೆಯಲು ಒಂದು ವರ್ಷ ಕಾಯಬೇಕು. ಇಷ್ಟೆಲ್ಲಾ ಕಷ್ಟ ಪಟ್ಟು ತನ್ನ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗದೆ ನೊಂದಿರುವಾಗ ಸರ್ಕಾರ ಮುಂದೆ ಬಂದು ಬೆಂಬಲ ಬೆಲೆಗೆ ಕೊಬ್ಬರಿ ಖರೀದಿ ಮಾಡಿದರೆ ಇಲ್ಲಿನ ಭ್ರಷ್ಟ ಅಧಿಕಾರಿಯಾದ ಕೃಷ್ಣಮೂರ್ತಿ ಸ್ಥಳಿಯ ಜನರನ್ನು ಇಟ್ಟುಕೊಂಡು ಒಬ್ಬೊಬ್ಬ ರೈತರಿಂದ ಪ್ರತಿ ಚೀಲಕ್ಕೆ 350 ರಿಂದ 400 ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ.. ಪ್ರತಿ ದಿನ ಸರಿ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇರುವುದನ್ನು ಖರೀದಿ ಕೇಂದ್ರದ ಹಣ ವಸೂಲಿಗಾರ ಹೇಳಿದ್ದಾನೆ. ವಿಶೇಷ ತನಿಖೆ ನಡೆಸಿದರೆ ಭ್ರಷ್ಟ ಜಾಲದ ಬಗ್ಗೆ ತಿಳಿಯಲು ಸಾಧ್ಯ.
ಸಂಬಂಧಪಟ್ಟ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ, ಎಂ ಪಿ ಎಂ ಸಿ ಮಾರುಕಟ್ಟೆಯ ಮುಖ್ಯ ಅಧಿಕಾರಿ ಶ್ರಿ ಹರಿ ಹಾಗೂ ಫೆಡರೇಷನ್ ಮ್ಯಾನೇಜರ್ ಮಂಜುನಾಥ್ ಅವರಿಗೆ ದೂರು ನೀಡಲಾಗಿದೆ. ಮೂರು ವಾರ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದು ಕಂಡು ಬರುತ್ತಿಲ್ಲ.ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದು ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿ ಭ್ರಷ್ಟ ಅಧಿಕಾರಿಗಳು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ.ಇದರಲ್ಲಿ ದೊಡ್ಡ ಜಾಲವೇ ಇರುವುದು ಕಂಡುಬರುತ್ತಿದೆ.