Thursday, November 27, 2025

Latest Posts

ಮಾಸ್ ಗೆ ಬಾಸ್ ಡಿಬಾಸು…. ಅಬ್ಬರಿಸಿದ ಡಿಬಾಸ್ ‘ರಾಬರ್ಟ್’ ಟ್ರೇಲರು…

- Advertisement -

ಬಾಕ್ಸ್ ಆಫೀಸ್ ಸುಲ್ತಾನ… ಕಷ್ಟವಗಳನ್ನೇ ಸವಾಲುಗಳನ್ನಾಗಿ ಚಾಲೆಂಜ್ ಆಗಿ ಸ್ವೀಕರಿಸಿದ ಗೆದ್ದ ಚಾಲೆಂಜಿಂಗ್ ಸ್ಟಾರ್… ಅಭಿಮಾನಿಗಳ ನೆಚ್ಚಿನ ದಾಸನಿಗಿಂದು ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಕಾರಣದಿಂದ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಆದ್ರೂ ದಚ್ಚು ಫ್ಯಾನ್ಸ್ ಗೆ ಭರ್ಜರಿ ರಸದೌತಣ ಉಣಬಡಿಸಿದ್ದಾರೆ. .

ಯೂಟ್ಯೂಬ್ ನಲ್ಲಿ ‘ರಾರ್ಬಟ್’ ಟ್ರೇಲರ್ ಚಿಂದಿ-ಚಿಂದಿ

ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ದಚ್ಚು ನಟನೆಯ ಬಹುನಿರೀಕ್ಷಿತ ಸಿನಿಮಾದ ರಾಬರ್ಟ್ ಟ್ರೇಲರ್ ರಿಲೀಸ್ ಆಗಿದೆ. ದಾಸನ ಖಡಕ್ ಎಂಟ್ರಿ… ವಿಲಸ್ಸ್ ಗಳ ಖದರ್, ಪಂಚಿಂಗ್ ಡೈಲಾಗ್.. ಎಲ್ಲವೂ ಟ್ರೇಲರ್ ನಲ್ಲಿ ಅದ್ಭುತವಾಗಿ‌ ಮೂಡಿ ಬಂದಿದೆ.

ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ದಚ್ಚು ಖಡಕ್ ಡೈಲಾಗ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನೀನು ಮಾಸ್ ಆದ್ರೆ ನಾನು…ಈ ಕೈಗೆ ಶಬರಿ ಮುಂದೆ ಸೋಲುವುದು ಗೊತ್ತು…ರಾವಣನ‌ ಮುಂದೆ ಗೆಲ್ಲುವುದು ಗೊತ್ತು..ಅನ್ನೋ ಡೈಲಾಗ್ ಗೆ ದಚ್ಚು ಭಕ್ತಗಣ ಕೇಕೇ ಹಾಕ್ತಿದ್ದಾರೆ. ದಾಸನ ಮಾಸ್ ಅಂಡ್ ಕ್ಲಾಸ್ ಅವತಾರ‌ಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸಿನಿಮಾದಲ್ಲಿನ ದರ್ಶನ್ ಗೆ ಜೋಡಿಯಾಗಿ ಆಶಾಭಟ್​ ನಟಿಸಿದ್ರೆ, ಜಗಪತಿ ಬಾಬು, ರವಿಶಂಕರ್​, ರವಿ ಕಿಶನ್​, ವಿನೋದ್​ ಪ್ರಭಾಕರ್​ ಪ್ರತಿಯೊಬ್ಬರ ಪಾತ್ರಗಳನ್ನು ಅಚ್ಚುಕಟ್ಟಾಗಿ ಟ್ರೇಲರ್​ನಲ್ಲಿ ಪರಿಚಯಿಸಲಾಗಿದೆ.

ತರುಣ್​ ಸುಧೀರ್​ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾಕ್ಕೆ ಉಮಾಪತಿ ಬಂಡವಾಳ ಹೂಡಿದ್ದು, ರಾಬರ್ಟ್​ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

- Advertisement -

Latest Posts

Don't Miss