Film news:
ಸ್ಯಾಂಡಲ್ ವುಡ್ ತಾರೆಯರೆಲ್ಲಾ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಬ್ಯುಸಿ ಇರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್ ಜೊತೆ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ದಚ್ಚು ವಿದೇಶಕ್ಕೆ ಹೋಗ್ತಿದ್ದಾರಾ? ಯಾವುದಾದರೂ ಹೊಸ ಸಿನಿಮಾ ಮಾಡ್ತಿದ್ದಾರಾ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲು ಮೂಡಿದೆ. ಆ ಎಲ್ಲಾ ವಿಚಾರಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ನಟ. ತನ್ನ ಸರಳ ಸ್ವಭಾವದಿಂದಲೇ ತನ್ನ ಅಭಿಮಾನಿಗಳ ಮನಗೆದ್ದಿರೋ ಡಿ ಬಾಸ್ ಇಂದು ವಿಮಾನ ನಿಲ್ದಾಣದಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡು ಫ್ಯಾನ್ಸ್ ಗೆ ಅಚ್ಚರಿ ಮೂಡಿಸಿದ್ದಾರೆ.
ಹೌದು ದಚ್ಚು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು ಬಾಕ್ಸ್ ಆಫೀಸ್ ಸುಲ್ತಾನ್ ವಿದೇಶಕ್ಕೆ ಹಾರಿದ್ದಾರೆ ಎಂದು ಸುದ್ದಿ ತಿಳಿದು ಬಂದಿದೆ. ಹೌದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸೈಮಾ ಅವಾರ್ಡ್ ನಲ್ಲಿ ದಚ್ಚು ಭಾಗಿಯಾಗಿದ್ರು. ರಾಬರ್ಟ್ ಚಿತ್ರ ಅನೇಕ ಪ್ರಶಸ್ತಿಯನ್ನು ತನ್ನ ಪಾಲಾಗಿಸಿದ ನಂತರ ದರ್ಶನ್ ಇದೀಗ ವಿದೇಶಕ್ಕೆ ಹಾರಿರುವ ಸುದ್ದಿ ಭಿತ್ತರವಾಗುತ್ತಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ದರ್ಶನ್ ವೈಟ್ ಟೀ ಶರ್ಟ್ ಬ್ಲಾಕ್ ಜೀನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಪಾಸ್ ಪೋರ್ಟ್ ಕಾಣಿಸಿಕೊಂಡಿದ್ದು ಇದೀಗ ಅವರು ವಿದೇಶಕ್ಕೆ ಹೋಗುತ್ತಿರುವುದು ಖಾತ್ರಿಯಾಗಿದೆ. ಹಾಗೆಯೇ ವಿಜಯ್ ತೂಗುದೀಪ ರವರು ಈ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಅವರು ವಿದೇಶಕ್ಕೆ ಹೋಗುತ್ತಿರುವುದು ನಿಜವಾಗಿದ್ದು ಥಾಯ್ಲ್ಯಾಂಡ್ ಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದ್ದಕ್ಕಿದ್ದಂತೆ ವಿದೇಶಕ್ಕೆ ಹಾರಿರುವುದು ಕುತೂಹಲ ಮೂಡಿಸಿದೆ.
ಈಗಾಗಲೇ ಡಿ ಬಾಸ್ ನಟನೆಯ ಕುತೂಹಲ ಪೋಸ್ಟರ್ ನಿಂದಲೇ ಸದ್ದು ಮಾಡಿದ್ದ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಭರದಿಂದಲೇ ಸಾಗುತ್ತಿದೆ. ಕ್ರಾಂತಿ ಸಿನಿಮಾದ ವಿಚಾರವಾಗಿ ವಿದೇಶಕ್ಕೆ ಹೋದ್ರಾ ಇಲ್ಲ ಮತ್ತೊಂದು ಚಿತ್ರ ಈಗಾಗಲೆ ನಿಗಧಿಯಾಗಿದ್ದು ಡಿ 56 ಚಿತ್ರದ ಶೂಟಿಂಗ್ ಗಾಗಿ ಹೋದ್ರಾ ಇಲ್ಲ ಪ್ರವಾಸ ಉದ್ದೇಶದಿಂದ ವಿದೇಶಕ್ಕೆ ಹೋದ್ರಾ ಎಂಬ ಕುತೂಹಲಕಾರಿ ಪ್ರಶ್ನೆಗಳು ಈಗ ಕೇಳಿ ಬರುತ್ತಿವೆ.
BOSS ❤️#DBoss #ChallengingStarDarshan #Kranti #KrantiBegins pic.twitter.com/P6bkj590QN
— Vijay Thoogudeepa (@MYD6050CNV4787) September 11, 2022
ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!