DCM ಡಾ. ಅಶ್ವಥ್ ನಾರಾಯಣ್ ರಿಂದ ಕೋವಿಡ್ ಇಂಡಿಯಾ ಅಭಿಯಾನದ ಬ್ರೀತ್ ಇಂಡಿಯಾ ಗೆ ಚಾಲನೆ

Bangaluru : ಉಪ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಾ. ಅಶ್ವಥ್ ನಾರಾಯಣ್ ಅವರು ಕೋವಿಡ್ ಇಂಡಿಯಾ ಅಭಿಯಾನ ನಡೆಸುತ್ತಿರುವ ಬ್ರೀತ್ ಇಂಡಿಯಾ ಗೆ ಇಂದು ಚಾಲನೆ ನೀಡಿದರು. ಶ್ರೀ ಅಲೋಕ್ ಕುಮಾರ್ ಎಡಿಜಿಪಿ ಮೀಸಲು ಪೊಲೀಸ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಆಮ್ಲಜನಕ ಸಾಂದ್ರೀಕೃತ, ಡಿಫಿಬ್ರಿಲೇಟರ್ ಗಳು ಮತ್ತು ಬಿ ಐಪಿಎಪಿ ಯಂತ್ರಗಳು, ರೋಗಿಗಳನ್ನು ಪರಿವೀಕ್ಷಿಸು/ ಮಾನಿಟರ್ ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ವಿತರಿಸಿದ್ರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯ ಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು, ಇಷ್ಟು ಕಡಿಮೆ ಸಮಯದಲ್ಲಿ ಒಗ್ಗೂಡಿ ಈಗಾಗಲೇ 6 ಕೇಂದ್ರಗಳನ್ನು ಬೆಂಬಲಿಸಿದ್ದಕ್ಕಾಗಿ ಸಂಘಟಕರಿಗೆ ಧನ್ಯವಾದ ಅರ್ಪಿಸಿ, “ಬ್ರೀತ್ ಇಂಡಿಯಾ ಉಪಕ್ರಮದಿಂದ ಕರ್ನಾಟಕ ರಾಜ್ಯದಾದ್ಯಂತ 7 ಸಮುದಾಯ ಆಮ್ಲಜನಕ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಅಗತ್ಯವಿರುವ ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಕೋವಿಡ್ ಇಂಡಿಯಾ ಅಭಿಯಾನಕ್ಕೆ ಧನ್ಯವಾದಗಳನ್ನ ತಿಳಿಸಿದ್ರು.. ಆಸ್ಪತ್ರೆಗಳಲ್ಲಿನ ಆಮ್ಲಜನಕದ ಅಗತ್ಯವನ್ನು ಸರಾಗಗೊಳಿಸುವಲ್ಲಿ ಮತ್ತು ರಾಜ್ಯದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚುಸುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸಿದೆ ” ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಐಸಿಎಟಿಟಿ ಫೌಂಡೇಶನ್‌ನ ಅಧ್ಯಕ್ಷ ಮತ್ತು ಕೋವಿಡ್ ಇಂಡಿಯಾ ಅಭಿಯಾನದ ಸಹ-ಸಂಸ್ಥಾಪಕ ಡಾ. ಶಾಲಿನಿ ನಲ್ವಾಡ್ ಅವರು, “ನಾವು ಮೊದಲ ತರಂಗದಿಂದ ಬಹಳ ಸಕ್ರಿಯರಾಗಿದ್ದೇವೆ, 4 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಎನ್ 95 Mask, ಪಿಪಿಇ ಕಿಟ್‌ಗಳು ಮತ್ತು ಇತರ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಶಕ್ತಗೊಳಿಸಿದ್ದೇವೆ. ಮುಂಚೂಣಿ ಕೆಲಸಗಾರರಿಗೆ ಈಗ ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯಗಳನ್ನು ನಿಯೋಜಿಸುವ ಮೂಲಕ ಸಾಮಾನ್ಯ ಹಾಸಿಗೆಗಳನ್ನು ಆಮ್ಲಜನಕಯುಕ್ತ ಹಾಸಿಗೆಗಳಾಗಿ ಪರಿವರ್ತಿಸುವತ್ತ ಗಮನ ಹರಿಸಿದ್ದೇವೆ ” ಎಂದರು.

www.karnatakatv.net, Bangalore

About The Author