ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಕ ಅಂದ್ರೆ ಯಾರು? ನಾಯಕ ಪದದ ಅರ್ಥ ಮೊದಲು ಕುಮಾರಸ್ವಾಮಿ ತಿಳಿದುಕೊಳ್ಳಲಿ. ಮಾತನಾಡುವಾಗ ನಾಲಿಗೆ ಶುದ್ದವಾಗಿರಬೇಕು. ಕುಮಾರಸ್ವಾಮಿ ಗೆ ಭ್ರಷ್ಟಮುಕ್ತ, ಪ್ರಮಾಣಿಕ ರಾಜಕಾರಣ ಮಾಡಲು ಬಂದಿಲ್ಲ ಅಂತ ತಿರುಗೇಟು ನೀಡಿದ್ರು.
ಜನರಿಗೋಸ್ಕರ ನಾವು ಕೆಲಸ ಮಾಡಲು ಬಂದಿದ್ದೇವೆ
ಕಳಂಕ ಇಟ್ಟುಕೊಂಡು ರಾಜಕೀಯ ಮಾಡಲು ನಾವು ಬಂದಿಲ್ಲ. ಜನರಿಗೆ ಸಲ್ಲುವ ರೀತಿ ಬಂದು ನಾವು ರಾಜಕೀಯ ಮಾಡುತ್ತಿದ್ದೇವೆ. ಇದನ್ನೇ ಹೊಟ್ಟೆ ಪಾಡು ಮಾಡಿಕೊಂಡು ಬದುಕಿರುವ ವ್ಯಕ್ತಿಗಳು ನಾವಲ್ಲ ಅಂತ ಕುಮಾರಸ್ವಾಮಿ ಕಾಲೆಳೆದ್ರು. ಅವರ ಕಂಪನಿ ಹೇಗೆ ನಡೆಯುತ್ತಿತ್ತು ಅಂತಾ ಅವರೇ ಹೇಳಲಿ. ತಾನು ಎಷ್ಟು ಪ್ರಾಮಾಣಿಕ ಅಂತಾ ತಿಳಿದುಕೊಂಡು ಅವರು ಮಾತಾಡಲಿ. ಸುಮ್ನೆ ಬಾಯಿ ಇದೆ ಅಂತಾ ಮಾತಾಡೋದಲ್ಲ ನಾಲಿಗೆಗೆ ಬೆಲೆ ಇರಬೇಕು, ನಾಲಿಗೆ ಶುದ್ದ ಇರಬೇಕು ಅಂತ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.