Tuesday, October 14, 2025

Latest Posts

DCM ಡಿ.ಕೆ. ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ

- Advertisement -

ಡಿಸಿಎಂ ಡಿ.ಕೆ ಶಿವಕುಮಾರ್‌, ದೇಶದ 2ನೇ ಶ್ರೀಮಂತ ಸಚಿವರಂತೆ. ಹೀಗಂತ ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳಿದೆ. ಗಂಭೀರ ಕ್ರಿಮಿನಲ್ ಆರೋಪದಲ್ಲಿ, 30 ದಿನ ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಪದಚ್ಯುತಿಗೊಳಿಸುವ, 3 ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಈ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ, ಶ್ರೀಮಂತ ಸಚಿವರ ಪಟ್ಟಿಯನ್ನು ಎಡಿಆರ್ ಬಿಡುಗಡೆ ಮಾಡಿದೆ.

27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡೆವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಇವರಲ್ಲಿ 302 ಸಚಿವರು ಅಂದರೆ, ಶೇಕಡ 47ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಆರೋಪವಿದೆ. ಇವರಲ್ಲಿ 174 ಸಚಿವರು ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. 336 ಬಿಜೆಪಿ ಸಚಿವರ ಪೈಕಿ 136 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ 88 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ. 4 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ, 45 ಸಚಿವರ ಮೇಲೆ ಕ್ರಿಮಿನಲ್ ಆರೋಪ ಇದೆ. ಈ ಪೈಕಿ 18 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ.

ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ತೆಲಂಗಾಣ, ಹಿಮಾಚಲ ಪ್ರದೇಶ, ದೆಹಲಿ ಮತ್ತು ಪುದುಚೇರಿ ಸೇರಿದಂತೆ 11 ವಿಧಾನಸಭೆಯ ಶೇಕಡ 60ರಷ್ಟು ಸಚಿವರ ಮೇಲೆ, ಕ್ರಿಮಿನಲ್ ಆರೋಪವಿದೆ. ಇದಕ್ಕೆ ವಿರುದ್ಧವಾಗಿ ಹರಿಯಾಣ, ಜಮ್ಮುಕಾಶ್ಮೀರ, ನಾಗಲ್ಯಾಂಡ್, ಉತ್ತರಾಖಂಡ್ ರಾಜ್ಯಗಳಲ್ಲಿ ಯಾವುದೇ ಸಚಿವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.

ಕರ್ನಾಟಕದಲ್ಲಿ 8 ಮಂದಿ ಸಚಿವರ ಬಳಿ 100 ಕೋಟಿಗೂ ಹೆಚ್ಚು ಆಸ್ತಿ ಇದೆ. ತದನಂತರ ಆಂಧ್ರಪ್ರದೇಶದಲ್ಲಿ 6, ಮಹಾರಾಷ್ಟ್ರದಲ್ಲಿ ನಾಲ್ವರು ಕೋಟ್ಯಾಧಿಪತಿ ಸಚಿವರಿದ್ದಾರೆ.

ಟಾಪ್‌ 3 ಕೋಟ್ಯಾಧಿಪತಿ ಸಚಿವರು

1) ಚಂದ್ರಶೇಖರ್ ಪೆಮ್ಮಸಾನಿ – ಆಂಧ್ರಪ್ರದೇಶ (ಗುಂಟೂರು) – 5,705 ಕೋಟಿ
2) ಡಿ.ಕೆ. ಶಿವಕುಮಾರ್ – ಕರ್ನಾಟಕ (ಕನಕಪುರ) – 1,413 ಕೋಟಿ
3) ಎನ್. ಚಂದ್ರಬಾಬು ನಾಯ್ಡು – ಆಂಧ್ರಪ್ರದೇಶ ಸಿಎಂ – 931 ಕೋಟಿ

ಇನ್ನು, ಹೆಬ್ಬಾಳ ಕಾಂಗ್ರೆಸ್‌ ಶಾಸಕ ಭೈರತಿ ಸುರೇಶ್‌ 7ನೇ ಸ್ಥಾನ ಪಡೆದಿದ್ದು, 648 ಕೋಟಿ ಆಸ್ತಿ ಹೊಂದಿದ್ದಾರೆ. ಹಿರಿಯೂರು ಕಾಂಗ್ರೆಸ್‌ ಶಾಸಕ ಡಿ. ಸುಧಾಕರ್‌ 135 ಕೋಟಿ ಆಸ್ತಿ, ಮಂಡ್ಯ ಸಂಸದ ಮತ್ತು ಕೇಂದ್ರ ಸಚಿವ H.D. ಕುಮಾರಸ್ವಾಮಿ 217 ಕೋಟಿ, ಬೀದರ್‌ನ ರಹೀಂ ಖಾನ್‌ 83 ಕೋಟಿ, ಚಾಮರಾಜಪೇಟೆಯ ಜಮೀರ್‌ ಅಹಮದ್‌ 72 ಕೋಟಿ, ನಾಗಮಂಗಲದ ಚಲುವರಾಯಸ್ವಾಮಿ 71 ಕೋಟಿ, ಸೊರಬಾದ ಮಧುಬಂಗಾರಪ್ಪ 69 ಕೋಟಿ, ತುಮಕೂರಿನ ವಿ ಸೋಮಣ್ಣ 60 ಕೋಟಿ, ದೇವನಹಳ್ಳಿಯ ಕೆ.ಹೆಚ್‌. ಮುನಿಯಪ್ಪ ಬಳಿ 59 ಕೋಟಿ ಆಸ್ತಿ ಇದೆ.

- Advertisement -

Latest Posts

Don't Miss