ನವೆಂಬರ್ ಕ್ರಾಂತಿ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಿನ್ನೆಯೇ ದೆಹಲಿಗೆ ಹೋಗಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರನ್ನೂ ಭೇಟಿ ಮಾಡಿಲ್ಲ ಎಂದು ಡಿಕೆ ಹೇಳಿದ್ದಾರೆ. ಯಾವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಮಾಡಿಲ್ಲ. ಸಿಎಂ ಎಲ್ಲವನ್ನೂ ಮಾಡಿಕೊಳ್ಳುತ್ತಾರೆ. ನಾನು ಯಾವುದೇ ಲೀಡರ್‌ಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಆದ್ರೆ ಪಕ್ಷದ ಸಂಘಟನೆ ವಿಚಾರದಲ್ಲಿ ಭೇಟಿ ಮಾಡಲೇಬೇಕಾಗುತ್ತದೆ.
ಸಂಪುಟ ವಿಸ್ತರಣೆ, ನಾಯಕತ್ವ ವಿಚಾರ ಏನಿಲ್ಲ. ಸಂಪುಟ ವಿಚಾರವನ್ನೆಲ್ಲಾ ದೆಹಲಿಯಲ್ಲಿ ಹೈಕಮಾಂಡ್ ಯಾವಾಗ ಬೇಕೋ ಆಗ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ನಾನಾಗಲಿ, ಸಿಎಂ ಆಗಲಿ ಏನಾದ್ರೂ ಹೇಳಿದ್ದಾರಾ. ಪಾರ್ಟಿಯಲ್ಲಿ ಹೇಗೆ ಹೇಳ್ತಾರೋ ಅದರಂತೆ ಕೇಳಿಕೊಂಡು ಹೋಗುವುದಾಗಿ ಹೇಳಿದ್ದೇವೆ. 5 ವರ್ಷ ಸಿಎಂ ಇರಬೇಕೆಂದ್ರೆ 5 ವರ್ಷವೂ ಇರ್ತಾರೆ. 10 ವರ್ಷ, 15 ವರ್ಷ ಇರಬೇಕೆಂದ್ರೆ ಅವರೇ ಇರ್ತಾರೆ. ಪಾರ್ಟಿ ಹೇಳಿದಂತೆ ಮಾಡಿಕೊಂಡು ಹೋಗುತ್ತಿರುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನು ಪಾರ್ಟಿ ಲೈನ್ ಬಿಟ್ಟು ಹೋಗಲ್ಲ ಎಂದು ಡಿಕೆಶಿ ಹೇಳಿದ್ರು.
ಜೊತೆಗೆ ನವೆಂಬರ್ ಕ್ರಾಂತಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, ನವೆಂಬರ್-ಡಿಸೆಂಬರ್-ಜನವರಿ-ಫೆಬ್ರವರಿಯಲ್ಲೂ ಕ್ರಾಂತಿ ಆಗಿಲ್ಲ. 2028ಕ್ಕೆ ಗ್ಯಾರಂಟಿ ಕ್ರಾಂತಿ ಆಗುತ್ತದೆ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವೇ ವಾಪಸ್ ಬರುತ್ತದೆ. ನವೆಂಬರ್ 22 ಅಥವಾ 26ಕ್ಕೆ ಭಾರೀ ಬದಲಾವಣೆ ಆಗಲಿದೆ ಎಂಬ ವಿಚಾರವನ್ನು ಡಿಕೆಶಿ ನಿರಾಕರಿಸಿದ್ದಾರೆ. ಅವೆಲ್ಲವನ್ನೂ ಸುಮ್ಮನೆ ಹೇಳ್ತಿದ್ದಾರೆಂದು ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

