ರಾಜ್ಯ ರಾಜಕೀಯದಲ್ಲಿ ಕುರ್ಚಿ ಗುದ್ದಾಟ ಜೋರಾಗಿದೆ. ಏನು ಗೊತ್ತಿಲ್ಲದ ಹಾಗೆ ಸಿದ್ದರಾಮಯ್ಯ ಹಾಗು ಡಿಕೆಶಿ ಒಟ್ಟಿಗೆ ಮುಖಾಮುಖಿಯಾಗಿ ಬ್ರೇಕ್ ಪಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಶಾಸಕ ಮಂತರ್ಗೌಡ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಇಬ್ಬರು ಹೈಕಮಾಂಡ್ ಏನ್ ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧರಿದ್ದೇವೆ ಅಂತ ಈಗಾಗಲೇ ಹೇಳಿದ್ದಾರೆ ಇಬ್ಬರು ಸೇರಿ ಒಳ್ಳೆಯ ಆಡಳಿತ ಹೆಚ್ಚಿನ ಸಂಖ್ಯೆಯಲ್ಲಿ ಮಾಡಬೇಕು 2028ನೇ ಚುನಾವಣೆ ನಮ್ಮೆಲ್ಲರ ಗುರಿ ಅಭಿವೃದ್ಧಿ ಇರಬಹುದು, ಗ್ಯಾರಂಟಿ ಇರಬಹುದು. ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಂಡು ಬರ್ತಾ ಇದೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಮಗೆ ಕೈಜೋಡಿಸಿದ್ದಾರೆ. ವಿಶೇಷವಾಗಿ ಊಹಾಪೋಹಗಳು ಹಾಗೆ ನಡೆಯುತ್ತವೆ. ಹೈಕಮಾಂಡ್ ಹೇಳಿದ ಹಾಗೆ ಎಲ್ಲರೂ ಕೇಳಬೇಕು. ಅದೇ ರೀತಿ ಸಿಎಂ, ಡಿಸಿಎಂ ಇಬ್ಬರು ಕೇಳ್ತಾರೆ
ಜನರ ವಿಶ್ವಾಸಕ್ಕೆ ತಕ್ಕಂತೆ ಒಳ್ಳೆಯ ಆಡಳಿತ ಮಾಡಬೇಕು. 2028ನೇ ಚುನಾವಣೆ ಇವರ ನೇತೃತ್ವದಲ್ಲಿ ನಡೆಯಬೇಕು. ಅದೇ ನಮ್ಮ ಆಸೆ ಎಂದಿದ್ದಾರೆ
ದೆಹಲಿಗೆ ಹೋಗುವುದು ತಪ್ಪೇನಿಲ್ಲ. ಅವರಿಗೆ ಬೇಕಾಗಿದ್ದನ್ನ ಕೇಳುವುದು ಕೂಡ ತಪ್ಪಿಲ್ಲ. ಅವಕಾಶ ಕೊಟ್ಟಿದ್ದಾರೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಅಂತ ಇಲ್ಲೇ ಕಾಲ ಕಳೆಯುತ್ತಿದ್ದೇವೆ. ನಾನು ಬೆಂಗಳೂರಿಗೆ ಹೋಗಿದ್ದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಹೋಗಿದ್ದೆ. ಡಿಕೆಶಿ ಅವರ ಮನೆಗೆ ಹೋಗಿದ್ದೆ.
ಅದೇ ರೀತಿ ಮೂರ್ನಾಲ್ಕು ಸಚಿವರನ್ನ ಭೇಟಿ ಮಾಡಿ ಬಂದಿದ್ದೇನೆ. ಹಾಗೆ ಭೇಟಿ ಮಾಡಿ ಬಂದಿದ್ದೇನೆ ಅಂದ್ರೆ ಬರಿ ರಾಜಕೀಯ ಅಲ್ಲ, ಅಭಿವೃದ್ಧಿ ಬಗ್ಗೆ ಕೂಡ ಮಾತನಾಡಿದ್ದೇನೆ. ನಾವು ಪಾರ್ಟಿ ಬೆಂಬಲ. ನಾವು ಸಿದ್ದು ಅಲ್ಲ. ಡಿಕೆಶಿ ಪರ ಕೂಡ ಅಲ್ಲ. ನಾವು ಕಾಂಗ್ರೆಸ್ ಪಕ್ಷದ ಪರ ಎಂದಿದ್ದಾರೆ
ವರದಿ : ಲಾವಣ್ಯ ಅನಿಗೋಳ




