ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ಮಾರಕ ಆಫ್ರಿಕನ್ ಹಂದಿ ಜ್ವರ ಆತಂಕ ಸೃಷ್ಟಿಸಿದೆ. ಕಳೆದ ಕೆಲ ದಿನಗಳಿಂದ ಈ ರೋಗದ ಪರಿಣಾಮವಾಗಿ ಹಂದಿಗಳು ಗಣನೀಯ ಸಂಖ್ಯೆಯಲ್ಲಿ ಮೃತಪಟ್ಟಿದೆ. ಹಂದಿ ವೈರಸ್ ತಡೆಯಲು ಪಶುಸಂಗೋಪನಾ ಇಲಾಖೆ ಕಠಿಣ ನಿರ್ಧಾರ ಕೈಗೊಂಡಿದೆ.
ಹೆಬ್ರಿ ಗ್ರಾಮದ ಹಂದಿ ಫಾರ್ಮ್‌ನಲ್ಲಿ ಆಗಸ್ಟ್ 19ರಿಂದ ಹಲವಾರು ಹಂದಿಗಳು ಅಸ್ವಸ್ಥವಾಗುತ್ತಿದ್ದವು. ಅಲ್ಲದೇ, ಕಳೆದ ಕೆಲವು ದಿನಗಳಲ್ಲಿ ಸುಮಾರು 50 ಹಂದಿಗಳು ಸಾವನ್ನಪ್ಪಿವೆ. ಇದರಿಂದ ಆತಂಕಗೊಂಡ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತ ಹಂದಿಗಳ ಮಾದರಿಗಳನ್ನು ಭೂಪಾಲ್‌ನ ನಿಷಾನ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಲ್ಯಾಬ್ ವರದಿಯಿಂದ ಶಾಕ್ ನೀಡುವ ಅಂಶಗಳು ಬಹಿರಂಗವಾಗಿವೆ. African Swine Fever (ASF) ಎಂಬ ಮಾರಕ ವೈರಸ್ ಈ ಸಾವಿಗೆ ಕಾರಣವಾಗಿದೆ ಎಂಬುದು ದೃಢಪಟ್ಟಿದೆ. ಈ ರೋಗವು ಇತರ ಪ್ರಾಣಿಗಳಿಗೆ, ಮುಖ್ಯವಾಗಿ ಹಂದಿಗಳಿಗೆ ಮಾತ್ರ ಹರಡುವ ಒಂದು ವೈರಲ್ ರೋಗವಾಗಿದೆ.
ವೈರಸ್ ಹರಡುವಿಕೆ ತಡೆಗಟ್ಟಲು, ಪಶುಸಂಗೋಪನಾ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಫಾರ್ಮ್‌ನಲ್ಲಿ ಉಳಿದಿರುವ 57 ಹಂದಿಗಳನ್ನು ಆಗಸ್ಟ್ 29ರಂದು ಕಲ್ಲಿಂಗ್ ಮಾಡಲಾಗುವುದು ಎಂದು ಜಿಲ್ಲಾ ಉಪನಿರ್ದೇಶಕ ರಂಗಪ್ಪ ತಿಳಿಸಿದ್ದಾರೆ. ಈ ಕ್ರಮ ಹಂದಿ ಜ್ವರವನ್ನು ತಡೆಗಟ್ಟುವ ದಿಟ್ಟ ಹೆಜ್ಜೆಯಾಗಿದೆ.
ಜನರಲ್ಲಿ ಕೆಲವೆಡೆ ಆತಂಕವಿದೆ. ಆದರೆ, ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ರೋಗ ಮನುಷ್ಯರಿಗೆ ಹರಡುವುದಿಲ್ಲ. African Swine Fever ಮಾನವರೋಗವಲ್ಲ. ಹಂದಿಗಳ ಮೂಲಕ ಈ ರೋಗ ಯಾರಿಗೂ ಬರುವುದಿಲ್ಲ. ಆದ್ದರಿಂದ ಜನರು ಆತಂಕಪಡಬೇಕಾದ ಅಗತ್ಯವಿಲ್ಲ.
ಸ್ಥಳೀಯರು ಈ ಕುರಿತು ಆತಂಕಗೊಂಡಿರುವುದು ಸಹ ಸತ್ಯ. ಆದರೆ ಅಧಿಕಾರಿಗಳು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ನಾವು ಬದ್ಧರಾಗಿದ್ದೇವೆ. ಜನರ ಆರೋಗ್ಯಕ್ಕೆ ಯಾವುದೇ ಅಪಾಯ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ