Sunday, May 19, 2024

Latest Posts

ಜೋಶಿಯವರೇ ನೀವು ಭಕ್ತ ಪ್ರಹ್ಲಾದ ಆಗ್ಬಾರ್ದು, ಉಗ್ರನರಸಿಂಹನ ರೂಪ ತಾಳಬೇಕು: ನಟ ಪ್ರಥಮ್

- Advertisement -

Hubli News: ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದ್ದು, ಈ ಸಂಬಂಧ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಇದೀಗ ಈ ಬಗ್ಗೆ ಬಿಗ್‌ ಬಾಸ್‌ ವಿನ್ನರ್‌, ನಟ ಪ್ರಥಮ್‌ ಪ್ರತಿಕ್ರಿಯಿಸಿದ್ದು, ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ಬಿಗ್‌ ಬಾಸ್‌ ವಿನ್ನರ್‌, ನಟ ಪ್ರಥಮ್ ಇಂದು ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿಗೆ ಸಿನೆಮಾ ಪ್ರಮೋಷನ್‌ಗೆ ಬರುತ್ತಿದ್ದೆವು. ಇದೀಗ ಸೂತಕದ ಮನೆಗೆ ಬಂದಿದ್ದು, ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಪ್ರಲ್ಹಾದ್ ಜೋಶಿಯವರು ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸಿದ್ದಾರೆ.

ಕಠಿಣ ಕಾನೂನು ತರಬೇಕು: ನೇಹಾ ಹತ್ಯೆಯಿಂದ ಇಡೀ ದೇಶವೇ ದುಃಖ ಪಡುವಂತಾಗಿದೆ. ಈ ಭಾಗದ ಎಂಪಿ ಪ್ರಹ್ಲಾದ್ ಜೋಶಿ ಸಾಹೇಬ್ರೆ ನೀವು ಭಕ್ತ ಪ್ರಹ್ಲಾದ ಆಗಬಾರದು, ಉಗ್ರ ನರಸಿಂಹನ ರೂಪ ತಾಳಬೇಕು. ಇಲ್ಲವಾದ್ರೆ ಹಿರಣ್ಯಕಶ್ಯಪ್ ರೀತಿ ಬಲಿಯಾಗಿಬಿಡುತ್ತೇವೆ. 10 ವರ್ಷ ಅಧಿಕಾರದಲ್ಲಿದ್ದೀರಿ, ಸಾಧ್ಯವಾದರೆ ಒಂದು ಕಠಿಣ ಕಾನೂನು ತರಬೇಕು ಎಂದರು. ಇನ್ನು ರಾಜಕೀಯ ನಾಯಕರೇ ನೀವು ಕೊಡುವ ಹೇಳಿಕೆ ನೇಹಾ ಕುಟುಂಬಕ್ಕೆ ತುಂಬಾ ನೋವುಂಟು ಮಾಡುತ್ತಿದೆ. ಬೇಗನೇ ಆರೋಪಿಗೆ ಶಿಕ್ಷೆಯಾದಾಗ ಮಾತ್ರ ನೇಹಾ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದರು.

ಅಯೋಗ್ಯರನ್ನು ಮಟ್ಟ ಹಾಕಿ: ಗೃಹ ಸಚಿವರು, ಸಿಎಂ ವಿಚಾರ ಮಾಡಿ ಹೇಳಿಕೆ ಕೊಡಬೇಕು. ನೇಹಾ ಕುಟುಂಬಕ್ಕೆ ತೊಂದರೆ ಆಗುವಂತೆ ನಡೆದುಕೊಳ್ಳಬಾರದು. ಅವರಿಗೆ ಶೀಘ್ರ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇನ್ನು ನಿಮಗೆ ನಿಜವಾಗಲೂ ಕಾಮನ್ ಸೆನ್ಸ್ ಇದ್ದರೆ, ಇಂತಹ ಅಯೋಗ್ಯರನ್ನು ಮಟ್ಟ ಹಾಕಿ ಎಂದು ಪ್ರಥಮ್‌ ಹೇಳಿದರು.

ನಿಮಗ್ಯಾಕೆ ಹಿಂದೂಗಳ ಸಹವಾಸ ಬೇಕು?: ಮುಸ್ಲಿಂ ಸಮುದಾಯದವರು ಇಂತಹ ಅಯೋಗ್ಯರನ್ನು ಮಟ್ಟಹಾಕುವ ಕೆಲಸ ಮಾಡಬೇಕು. ಯಾರು ಅವನ ಪರ ವಕಾಲತ್ತು ವಹಿಸಿಕೊಳ್ಳಬಾರದು. ನಿಮ್ಮ ಧರ್ಮದಲ್ಲಿ ಮದುವೆಯಾಗಿ ಖುಷಿಯಾಗಿರಿ. ನಿಮಗ್ಯಾಕೆ ಹಿಂದೂಗಳ ಸಹವಾಸ ಬೇಕು? ನಿಮ್ಮ ಸಮುದಾಯದಲ್ಲಿ ಹತ್ತು ಮದುವೆಯಾಗಿ, ನಿಮ್ಮನ್ನು ಯಾರು ಕೇಳುತ್ತಾರೆ. ನಮ್ಮ ಹಿಂದೂಗಳ ತಂಟೆಗೆ ಬರಬೇಡಿ, ಇದು ಸರಿ ಇರುವುದಿಲ್ಲ ಎಂದು ವಾರ್ನ್‌ ಮಾಡಿದರು.

ಕಲಾವಿದರನ್ನು ಪೂಜಿಸಬೇಡಿ: ಯಾರೋ ಒಬ್ಬ ಕಲಾವಿದ ಚುನಾವಣೆಯ ಪ್ರಚಾರಕ್ಕೆ ಮಾತ್ರ ಬರುತ್ತಾರೆ. ಆದರೆ ಇಂತಹ ಘಟನೆಯಾದಾಗ ಧ್ವನಿ ಎತ್ತಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರಾ? ಎಂದು ಕಲಾವಿದರ ಬಗ್ಗೆ ನಟ ಪ್ರಥಮ್‌ ಅಸಮಾಧಾನ ವ್ಯಕ್ತಪಡಿಸದರು. ಇನ್ನು ಕಲಾವಿದರನ್ನು ತಲೆಮೇಲೆ ಇಟ್ಟುಕೊಂಡು ಮೆರೆಸಬೇಡಿ, ಪೂಜಿಸಬೇಡಿ. ಸಿಕ್ಕಾಗ ಮಾತ್ರ ಹಾಯ್ ಬಾಯ್ ಅಂತಾ ಹೇಳಿ ಸಾಕು. ಕಲಾವಿದರನ್ನು ಕಲಾವಿದರನ್ನಾಗಿ ಬಿಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ

ಲವ್ ಜಿಹಾದ್‌ಗೆ ದೇಶದಲ್ಲಿ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ‌: ಜಗದೀಶ್ ಶೆಟ್ಟರ್

ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss