Dharwad News: ಹಿಟ್ ಆ್ಯಂಡ್ ರನ್‌ನಿಂದಾಗಿ ಧಾರವಾಡದಲ್ಲಿ ಜೀವ ಕಳೆದುಕೊಂಡಿದ್ದ ರೋಹಿತ್ ಅಂಗಾಗವನ್ನು ಕುಟುಂಬಸ್ಥರು ತಮ್ಮ ಮಗನ ಕಳೆದುಕೊಂಡ ದುಃಖದಲ್ಲೂ ಅಂಗಾಗ ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ನೇರವಾಗಿ ಮಾನವೀಯತೆಯ ಮೆರೆದಿದ್ದು, ಗುರುವಾರ ತಡ ರಾತ್ರಿ ಅಂಗಾಗವನ್ನು ಪೊಲೀಸ್ ಬೆಂಗಾವಲು ಮೂಲಕ ರವಾನೆ ಮಾಡಲಾಯಿತು.
ಧಾರವಾಡದ ಓಲ್ಡ್ ಡಿಎಸ್ಪಿ ವೃತದ ಬಳಿಯಲ್ಲಿ ಬುಲೇರೊ ವಾಹನ ಬೈಕ್‌ಗೆ ಹಿಟ್ ಆ್ಯಂಡ್ ರನ್‌ನಿಂದಾಗಿ ನಗರದ ಮದಿಹಾಳ ಶ್ರೀ ಸಿದ್ಧಾರೂಡ ಕಾಲನಿಯ ನಿವಾಸಿ ರೋಹಿತ ಜಗದೀಶ ಕುಂಬಾರ ಯುವಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸತ್ತೂರು ಬಳಿಯ ಎಸ್‌ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದು, ಮೃತನ ಅಂಗಾಗವನ್ನು ಗುರುವಾರ ತಡ ರಾತ್ರಿ ನಗರದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಗೆ ಮೃತ ರೋಹಿತ ಅಂಗಾಗವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಪೊಲೀಸ್ ಬೆಂಗಾವಲು ವಾಹನ ಸಹಾಯದೊಂದಿಗೆ ಅಂಬುಲೇನ್ಸ್‌ನಲ್ಲಿ ರವಾನೆ ಮಾಡಲಾಯಿತು.
ಕುಟುಂಬಸ್ತರು ತಮ್ಮ ದುಃಖ ಸಮಯದಲ್ಲೂ ಮಗನ ಅಂಗಾಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇನ್ನೂ ಘಟನೆಯ ಭಯಾನಕತೆಯ ದೈಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಮೃತ ಬೈಕ ಸವಾರ ರೋಹಿತ ತಾಯಿ ವೃತಿಯಲ್ಲಿ ನರ್ಸಾಗಿ ಸೇವೆ ಸಲ್ಲಿಸುತ್ತಿದ್ದು, ಮಗ ಬದುಕುಳಿಯುವ ಅನುಮಾನ ಅರಿತು ಅಂಗಾಗ ದಾನ ಮಾಡಿ ಇನ್ನೊಬ್ಬರ ಬದುಕಿಗೆ ಮಗನ ವಿವಿಧ ಅಂಗಗಳ ಮೂಲಕ ಬೆಳಕ್ಕಾಗಿದ್ದು, ರೋಹಿತ ಕುಟುಂಬಸ್ಥರ ಮಾದರಿಯ ನಿರ್ಧಾರಕ್ಕೆ ಇನ್ ನ್ಯೂಸ್ ಬಳಗ ಹಾಗೂ ವೀಕ್ಷಕರ ಕಡೆಯಿಂದ ಸಲಾಂ ಹೇಳಲೇಬೇಕು. ಈ ಘಟನೆ ಕುರಿತು ಧಾರವಾಡ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.