ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ವರದಿ ಸಿಎಂ ಸಿದ್ದರಾಮಯ್ಯ ಅವರ ಕೈಸೇರಿದೆ. ನಿವೃತ್ತ ಜಸ್ಟೀಸ್ ಮೈಕಲ್ ಕುನ್ಹಾ ನೇತೃತ್ವದ ಸಮಿತಿ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷದ ನಂತರ ಈ ಪ್ರಕರಣದ ತನಿಖೆ ನಡೆಸ್ತಿರೋದು, ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಮಾಜಿ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಕುನ್ಹಾ ಸಮಿತಿಯ ವರದಿ ಸರ್ಕಾರ ಕೈಸೇರಿದೆ. ಆದ್ರೆ, ವರದಿಯಲ್ಲಿ ಏನಿದೆ ಎಂಬುದನ್ನು ನಾನೇ ನೋಡಿಲ್ಲ. ಹೀಗಾಗಿರುವಾಗ ಸಂಸದ ಸುಧಾಕರ್ ಅವರಿಗೆ ವರದಿ ರಾಜಕೀಯ ಪ್ರೇರಿತ ಎಂದು ಎಸಿಸಲು ಹೇಗೆ ಸಾಧ್ಯ ಅಂತಾ ಪ್ರಶ್ನಸಿದ್ದಾರೆ. ಅಲ್ಲದೇ, ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೇಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ರು.
ಕೋವಿಡ್ ವೇಳೆ ಸುಧಾಕರ್ ತಪ್ಪು ಮಾಡಿದ್ದಾರೆ. ಅದಕ್ಕೆ ಚಡಪಡಿಸುತ್ತಿದ್ದಾರೆ. ವರದಿಯಲ್ಲಿ ಏನಿದೆ ಅನ್ನೋದು ಅವರಿಗೆ ಗೊತ್ತಿದ್ಯಾ? ವರದಿ ಬಹಿರಂಗ ಆಗದೇ ಟೀಕೆ ಯಾಕೆ ಮಾಡ್ತಿದ್ದಾರೆ ಎಂದು ಸಿಎಂ ಪ್ರಶ್ನಿಸಿದ್ರು.
ಕೋವಿಡ್ ಹಗರಣದ ಮಧ್ಯಂತರ ವರದಿ ಸಲ್ಲಿಕೆ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಕುನ್ಹಾ ಅವರ ಆಯೋಗಕ್ಕೆ ಇನ್ನೊಂದು 6 ತಿಂಗಳು ಕಾಲಾವಕಾಶ ಕೊಡಲಾಗಿದೆ. ಬಿಟ್‌ಕಾಯಿನ್ ಪ್ರಕರಣ, ಕೋವಿಡ್ ಪ್ರಕರಣ, ವಾಲ್ಮೀಕಿ ಪ್ರಕರಣ ಸೇರಿ ಎಲ್ಲ ಪ್ರಕರಣಗಳನ್ನೂ ಬಿಡುಗಡೆ ಮಾಡುತ್ತಿದ್ದೇವೆ. ಯಾವೆಲ್ಲ ತನಿಖೆ ಹಂತದಲ್ಲಿ ಇವೆಯೋ ಎಲ್ಲ ಪ್ರಕರಣಗಳ ರಿವ್ಯೂ ಮಾಡ್ತೇವೆ. ಇದಕ್ಕೆ ಮುಂದಿನ ದಿನಗಳಲ್ಲಿ ಒಂದು ಸಮಿತಿ ರಚನೆ ಮಾಡ್ತೇವೆ ಎಂದು ಹೇಳಿದ್ರು.
ಒಟ್ನಲ್ಲಿ ಮುಡಾ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುತ್ತಿದ್ದಂತೆ, ರಾಜ್ಯ ಸರ್ಕಾರ ಬಿಜೆಪಿ ಅವಧಿಯಲ್ಲಿನ ಹಗರಣಗಳಿಗೆ ಮರುಜೀವನ ನೀಡಲು ಮುಂದಾಗಿದೆ. ಕೋವಿಡ್ ಭ್ರಷ್ಟಾಚಾರ ಆರೋಪಕ್ಕೆ ಸುಧಾಕರ್ ಹೇಗೆ ತಿರುಗೇಟು ಕೊಡ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ.
- ವಿನಾಯಕ ಜಿ