- Advertisement -
Technology News:
ಭಾರತದಲ್ಲಿ 5G ನೆಟ್ವರ್ಕ್ ಸೇವೆಯನ್ನು ಆನಂದಿಸಲು ಏರ್ಟೆಲ್ ಬಳಕೆದಾರರು ಕಾದು ಕುಳಿತಿದ್ದಾರೆ. ಈಗಾಗಲೇ ರಿಲಯನ್ಸ್ ಒಡೆತನದ ಜಿಯೋ ಟೆಲಿಕಾಂ ಕಂಪನಿ ದೀಪಾವಳಿ ವೇಳೆಗ 5ಜಿ ಸೇವೆ ನೀಡುವುದಾಗಿ ಘೋಷಣೆ ಮಾಡಿದೆ. ಇದೀಗ ಭಾರ್ತಿ ಏರ್ಟೆಲ್ ಅತಿ ವೇಗದ ಇಂಟರ್ನೆಟ್ ಕನೆಕ್ಷನ್ 5G ಅನ್ನು ಸದ್ಯದಲ್ಲೇ ಎಲ್ಲ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಈ ಬಗ್ಗೆ ಏರ್ಟೆಲ್ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಅಖಿಲ್ ಗುಪ್ತಾ ಮಾಹಿತಿ ನೀಡಿದ್ದಾರೆ. ಮುಂದಿನ ತಲೆಮಾರಿನ ಏರ್ಟೆಲ್ 5G ಸೇವೆಯನ್ನು ಗ್ರಾಹಕರು ಕೆಲವೇ ವಾರಗಳಲ್ಲಿ ಪಡೆಯಲಿದ್ದಾರೆ ಎಂಮಬುವುದಾಗಿ ತಿಳಿದು ಬಂದಿದೆ.
- Advertisement -