Deepawali Snacks Recipe: ಒಂದರಿಂದ ಎರಡು ಕಪ್ ಪೇಪರ್ ಅವಲಕ್ಕಿ ಅಥವಾ ನೈಲಾನ್ ಅವಲಕ್ಕಿ, 4 ಸ್ಪೂನ್ ಎಣ್ಣೆ, ನಾಲ್ಕು ಹಸಿಮೆಣಸು, ಕರಿಬೇವು, ಕಾಲು ಕಪ್ ತುಂಡು ಮಾಡಿದ ಕಾಯಿ, ಅರ್ಧ ಕಪ್ ಶೇಂಗಾ, ಅರ್ಧ ಕಪ್ ಹುರಿಗಡಲೆ, ಜೀರಿಗೆ, ಗೋಡಂಬಿ, ಚಿಟಿಕೆ ಅರಿಶಿನ ಪುಡಿ, ಅರ್ಧ ಸ್ಪೂನ್ ಖಾರದ ಪುಡಿ, ಉಪ್ಪು, ಧನಿಯಾ ಪುಡಿ, ಕಾಲು ಕಪ್ ಸಕ್ಕರೆ ಪುಡಿ (ಅಗತ್ಯವಿದ್ದಲ್ಲಿ), ರೆಡಿಮೇಡ್ ಸೇವ್.
ಮೊದಲು ಗ್ಯಾಸ್ ಆನ್ ಮಾಡಿ, ಕಡಾಯಿ ಇರಿಸಿ. ಅದರಲ್ಲಿ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಗರಿ ಗರಿಯಾದ ಬಳಿಕ, ಅದನ್ನು ಒಂದು ಬೌಲ್‌ನಲ್ಲಿರಿಸಿ. ಬಳಿಕ ಅದೇ ಕಡಾಯಿಗೆ ಎಣ್ಣೆ, ಜೀರಿಗೆ, ಹಸಿಮೆಣಸು, ಕರಿಬೇವು, ಕಾಯಿ, ಶೇಂಗಾ, ನೆಲಗಡಲೆ, ಗೋಡಂಬಿ ಎಲ್ಲವನ್ನೂ ಒಂದೊಂದಾಗಿ ಹಾಕಿ ಹುರಿಯಿರಿ.
ಬಳಿಕ ಅದಕ್ಕೆ ಉಪ್ಪು, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಆಗಲೇ ಹುರಿದಿಟ್ಟುಕೊಂಡ ಅವಲಕ್ಕಿ, ಸಕ್ಕರೆ ಪುಡಿ, ರೇಡಿಮೇಡ್ ಸೇವ್ ಸೇರಿಸಿದರೆ, ಅವಲಕ್ಕಿ ಚಿವಡಾ ರೆಡಿ.