Friday, November 28, 2025

Latest Posts

ದೀಪಿಕಾಗೆ ದುರಾದೃಷ್ಟದ ಶಾಪ ! ಕೋಟ್ಯಂತರ ವ್ಯವಹಾರ ಕುಸಿತ

- Advertisement -

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈ ಸಮಯದಲ್ಲಿ ಅದೃಷ್ಟದಿಂದ ದೂರವಾಗಿದ್ದಾರಂತೆ. ಇತ್ತೀಚಿಗಷ್ಟೇ ಎರಡು ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೀಪಿಕಾ ಹೊರಬಿದ್ದಿದ್ದು, ಇದರಿಂದ ಅವರ ಕರೀಯರ್‌ಗೆ ದೊಡ್ಡ ಹೊಡೆತವಾಗಿದೆ. ಸಿನಿಮಾಗಳಲ್ಲಿ ಭಾಗವಹಿಸದೆ ಹೋದ ಕಾರಣಗಳು ದೀಪಿಕಾ ೮ ಗಂಟೆ ಕೆಲಸದ ಷರತ್ತು ಮತ್ತು ಸಂಭಾವನೆಯ ಕುರಿತಾಗಿ ಮಾತನಾಡಲಾಗುತ್ತಿದೆ. 8 ಗಂಟೆ ಕೆಲಸದ ನಿಯಮ ಮತ್ತು ದುಬಾರಿ ಸಂಭಾವನೆ ಕೇಳಿದ ಕಾರಣಕ್ಕೆ ನಟಿಯನ್ನ ಕೆಲವರು ಪ್ರಶ್ನಿಸಿದ್ದಾರೆ, ಆದರೆ ದೀಪಿಕಾ ಇದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಕರಿಯರ್ನ ಮತ್ತೊಂದು ಕಪ್ಪು ಮೋಡ ದೀಪಿಕಾ ಒಡೆತನದ ‘82°E’ ಸೌಂದರ್ಯ ಬ್ರ್ಯಾಂಡ್‌ಗೆ ಸಂಬಂಧಿಸಿದೆ. ಸ್ಕಿನ್ ಕೇರ್ ಮತ್ತು ಮೇಕಪ್ ಉತ್ಪನ್ನಗಳನ್ನು ಮಾರಾಟ ಮಾಡುವ ಈ ಕಂಪನಿಯು ಎರಡು ವರ್ಷಗಳಿಂದ ಕೋಟ್ಯಂತರ ನಷ್ಟದಲ್ಲಿದೆ. 2024ರಲ್ಲಿ 21.2 ಕೋಟಿ ರೂ. ಬಿಸ್ನೆಸ್ ಮಾಡುತ್ತಿದ್ದ ಕಂಪನಿ ಇದೀಗ 14.7 ಕೋಟಿ ರೂ. ಮಾತ್ರ ಮಾಡಲು ಸಾಧ್ಯವಾಗಿದೆ. ನಷ್ಟದ ಪ್ರಮಾಣವೂ ಕಡಿಮೆಯಾಗದೆ 23 ಕೋಟಿ ರೂ.ರಿಂದ 12.3 ಕೋಟಿ ರೂ.ಗೆ ಇಳಿಕೆಯಾಗಿದೆ.

ದೀಪಿಕಾ ತಮ್ಮ ವೃತ್ತಿಜೀವನದ ಶಿಖರದಲ್ಲಿ ಇದ್ದಾಗಲೇ ಸ್ವಂತ ಬ್ರ್ಯಾಂಡ್ ಆರಂಭಿಸಿ, ಬೃಹತ್ ಲಾಭ ಗಳಿಸಲು ಪ್ರಯತ್ನಿಸಿದರು. ಆದರೆ ಉತ್ಪನ್ನಗಳ ಬೆಲೆ ಹೆಚ್ಚು ಅನ್ನೋ ಕಾರಣಕ್ಕೆ ಜನರ ಪ್ರತಿಕ್ರಿಯೆ ತೀವ್ರವಾಗಿ ಕಡಿಮೆಯಾಗಿದ್ದು, ಈ ಕಾರಣದಿಂದ ‘82°E’ ಉದ್ಯಮ ನಿರಂತರ ನಷ್ಟ ಅನುಭವಿಸುತ್ತಿದೆ. ಹೀಗಾಗಿ, ನಟಿ ತನ್ನ ನಾಮಬಲವಿದ್ದರೂ, ಉದ್ಯಮದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಕೇರಿಯರ್ ಮತ್ತು ಬಿಸ್ನೆಸ್ ಎರಡೂ ಕಡೆ ಅಸಮಾಧಾನಕರ ಪರಿಣಾಮಗಳು ತೋರುತ್ತಿವೆ. ಕಲ್ಕಿ ಮತ್ತು ಸ್ಪಿರಿಟ್ ಚಿತ್ರಗಳಂತಹ ಪ್ರಮುಖ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳಿಂದ ಹೊರಬಿದ್ದ ಕಾರಣ ದೀಪಿಕಾ ಕರೀಯರ್‌ಗೆ ಸುದೀರ್ಘ ಹೊಡೆತವಾಗಿದೆ. ಇಷ್ಟಕ್ಕೂ ಬಿಸ್ನೆಸ್ ನಷ್ಟ ಸೇರಿಕೊಂಡು, ದೀಪಿಕಾ ಕಂಗಾಲಾಗುವಂತೆ ಪರಿಸ್ಥಿತಿ ನಿರ್ಮಾಗಿದೆ. ಈ ಸಮಯದಲ್ಲಿ ಅವರು ತಮ್ಮ ಮುಂದಿನ ಯೋಜನೆಗಳ ಮೂಲಕ ಈ ಸವಾಲುಗಳನ್ನು ಮೀರಿ ಮುಂದೆ ಸಾಗಬೇಕಾಗಿದೆ…

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss