www.karnatakatv.net: 7,965 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮತ್ತು 12 ಹಗುರ ಬಹುಪಯೋಗಿ ಹೆಲಿಕಾಪ್ಟರ್ ಗಳನ್ನು ಸೇನಾ ಪರಿಕರಗಳ ಖರೀದಿಗೆ ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 12 ಹೆಲಿಕಾಪ್ಟರ್ ಇಷ್ಟೇ ಅಲ್ಲದೇ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ ಲಿಂಕ್ಸ್ ಯು2 ನೌಕಾದಳದ ಗನ್‌ಫೈರ್ ನಿಯಂತ್ರಣ ವ್ಯವಸ್ಥೆ ಖರೀದಿಗೂ ಅನುಮೋದನೆ ನೀಡಲಾಗಿದೆ. ಇದು, ಯುದ್ಧ ಹಡಗುಗಳ ಸಾಮರ್ಥ್ಯ ವೃದ್ಧಿಸಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಖರೀದಿಗೆ ಸಂಬOಧಿಸಿದ, ಸಚಿವಾಲಯದ ಸಮಿತಿಯ ಸಭೆಯಲ್ಲಿ ಇಂತಹ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಚಿವಾಲಯದ ಹೇಳಿಕೆ ಪ್ರಕಾರ, ಸಮಿತಿಯು ಡಾರ್ನಿಯರ್ ವಿಮಾನವನ್ನು ಮೇಲ್ದರ್ಜೆಗೆ ಏರಿಸುವ ಹೊಣೆಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಒಪ್ಪಿಸುವುದು, ನೌಕಾದಳದ ಸಾಮರ್ಥ್ಯ ವೃದ್ಧಿ, ಕರಾವಳಿ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಪ್ರಸ್ತಾಪಗಳಿಗೂ ಅನುಮೋದನೆ ನೀಡಿತು ಎಂದು ತಿಳಿಸಿದೆ.
ಆತ್ಮನಿರ್ಭರ ಭಾರತ್ ಚಿಂತನೆಯ ಭಾಗವಾಗಿ ನೌಕಾಪಡೆಯ ಗನ್‌ಗಳ ಖರೀದಿಗೆ ಜಾಗತಿಕ ಮಟ್ಟದಲ್ಲಿ ಖರೀದಿಸುವುದನ್ನು ಕೈಬಿಡಲಾಗಿದೆ. ನಿರ್ದಿಷ್ಟ ಗುರಿಗೆ ಅನುಗುಣವಾಗಿ ಪ್ರಯೋಗಿಸಬಹುದಾದ ಇಂಥ ಗನ್‌ಗಳನ್ನು ನೌಕಾದಳದ ಯುದ್ಧ ಹಡಗುಗಳಿಗೆ ಅಳವಡಿಸಲಾಗುತ್ತದೆ ಎಂದು ಹೇಳಿಕೆಯು ತಿಳಿಸಿದೆ. ಇನ್ನು ಈ ನಿರ್ಧಾರವನ್ನು ‘ಮೇಕ್ ಇನ್ ಇಂಡಿಯಾ’ ಅನ್ವಯ ದೇಶೀಯವಾಗಿಯೇ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗೆ ಒತ್ತು ನೀಡಲಿವೆ ಎಂದು ಹೇಳಿಕೆ ತಿಳಿಸಿದೆ. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಸಂದರ್ಭದಲ್ಲಿಯೇ ಸೇನಾ ಪರಿಕರಗಳ ಸಾಮರ್ಥ್ಯ ವೃದ್ಧಿಗೂ ಒತ್ತು ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

