ಉಷ್ಣಮಾರುತದ ಪರಿಣಾಮದಿಂದ ಉತ್ತರ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ರಾಜಧಾನಿ ದೆಹಲಿಯಲ್ಲಿ ಒಂದೇದಿನ 20 ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್ ಹಾಗೂ ನೀರಿಗೆ ಕೆಲವೆಡೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಎಸಿ ಇಲ್ಲದ ಮನೆ ಹಾಗೂ ಆಸ್ಪತ್ರೆಗಳಲ್ಲಿ ಜನರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಉತ್ತರ ಭಾರತದಾದ್ಯಂತ ಬುಧವಾರವೂ ಸುಮಾರು 45 ಡಿಗ್ರಿ ತಾಪಮಾನ ದಾಖಲೆಯಾಗಿದೆ. ತಾಪಮಾನ ಏರಿಕೆಯಿಂದ ಹಾಗೂ ಉಷ್ಣಮಾರುತದಿಂದ ಎಸಿ, ಫ್ಯಾನ್‍ನಂಥ ಹವಾನಿಯಂತ್ರಿತ ಸಾಧನಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ.
ಉತ್ತರ ಭಾರತದ ಬಹುತೇಕ ಕಡೆ 45 ಡಿಗ್ರಿಗಿಂತ ಹೆಚ್ಚು ತಾಪಮಾನ ಮುಂದುವರಿದಿದೆ. ಇದರ ನಡುವೆ ಕಳೆದ 24 ಗಂಟೆಗಳಲ್ಲಿ ದಿಲ್ಲಿಯ 3 ಪ್ರಮುಖ ಆಸ್ಪತ್ರೆಗಳಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸಫರ್ ಜಂಗ್ ಆಸ್ಪತ್ರೆ, ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ ಹಾಗೂ ರಾಮ ಮನೋಹರ ಲೋಹಿಯಾ ಆಸ್ಪತ್ರೆಗಳಲ್ಲಿ ಒಟ್ಟು 20 ಜನರು ಬಿಸಿಗಾಳಿಯಿಂದ ಬಳಲಿ ದಾಖಲಾಗಿದ್ದರು. ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೇಸಿಗೆಯಲ್ಲಿ ದಿಲ್ಲಿಯಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೆಹಲಿ ಜಲ ಸಚಿವೆ ಅತಿಶಿ, ಸಮಸ್ಯೆ ಬಗೆಹರಿಯರೆದಿದ್ದರೆ ಜೂ.21ರಿಂದ ಅನಿರ್ದಿಷ್ಟ ಉಪವಾಸ ನಡೆಸುವುದಾಗಿ ಎಚ್ಚರಿಸಿದ್ದಾರೆ.
ದಿಲ್ಲಿ ಸೇರಿ ಉತ್ತರ ಭಾರತದಲ್ಲಿ ತಾಪಮಾನ 45 ಡಿಗ್ರಿ ಮೀರಿರುವ ನಡುವೆ ಸ್ಪೈಸ್ ಜೆಟ್ ವಿಮಾನದಲ್ಲಿ 1 ತಾಸು ಎಸಿ ಹಾಕದೇ ಪ್ರಯಾಣವನ್ನು ಸತಾಹಿಸಲಾಯಿತು ಎಂಬ ಆರೋಪಗಳು ಕೂಡಾ ಕೇಳಿಬಂದಿದೆ. ದಿಲ್ಲಿಯಿಂದ ದರ್ಭಂಗಾಗೆ ಹೋಗುವ ವಿಮಾನದಲ್ಲಿ ಈ ಘಟನೆ ನಡೆದಿದೆ. ದಿಲ್ಲಿಯಿಂದ ಬೆಳಿಗ್ಗೆ 11 ಕ್ಕೆ ಹೊರಡಬೇಕಿದ್ದ ವಿಮಾನಕ್ಕೆ 10 ರಂದಲೇ ಚೆಕ್ ಇನ್‍ಗೆ ಅವಕಾಶ ಕಲ್ಪಿಸಲಾಯಿತು. ಆದರೆ ವಿಮಾನ ಹಾರುವವರೆಗೆ ಎಸಿ ಹಾಕಲಿಲ್ಲ. ಇದು ತಾಂತ್ರಿಕ ದೋಷ ಎಂದು ಸ್ಪೈಸ್ ಜೆಟ್ ಸಿಬ್ಬಂದಿಗಳು ಸ್ಪಷ್ಟಣೆ ನೀಡಿದ್ದಾರೆ.
Dehali ;ಉಷ್ಣ ಮಾರುತಕ್ಕೆ ತತ್ತರಿಸಿದ ಜನ!
- Advertisement -
- Advertisement -