- Advertisement -
National News:
ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ ನಡೆದಿದೆ. ಭೂಮಿ ರಾಷ್ಟ್ರ ರಾಜಧಾನಿಯಲ್ಲಿ ನಡುಗಿದೆ.
ಹಲವು ಕಚೇರಿ, ಮನೆಗಳಲ್ಲಿ ಕಂಪನದ ಅನುಭವವಾಗಿದೆ.ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದ್ದು, ನೇಪಾಳದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದೆ. ನೇಪಾಳದ ಕಲಿಕಾ ಬಳಿ ಭೂಕಂಪನದ ಕೇಂದ್ರ ಬಿಂದುವಾಗಿದೆ. ನೇಪಾಳದಲ್ಲಿ ರಿಕ್ಟರ್ ಮಾಪಕ 5.8ರಷ್ಟು ತೀವ್ರತೆ ದಾಖಲಾಗಿದ್ದು, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಕಂಪನ ಕೇಂದ್ರಿತವಾಗಿದೆ. ಉತ್ತರ ಪ್ರದೇಶ, ಹರಿಯಾಣ ಸೇರಿ ಹಲವೆಡೆ ಕಂಪನವಾಗಿದ್ದು, ನೊಯ್ಡಾ, ಉತ್ತರಾಖಂಡ್ ಸೇರಿ ಕಂಪಿಸಿದ ಅನುಭವವಾಗಿದೆ. ಭೂಮಿ ಮಧ್ಯಾಹ್ನ 2.28ರ ಸುಮಾರಿಗೆ ಕಂಪಿಸಿದ್ದು, ಸುಮಾರು 10 ಸೆಕೆಂಡ್ಗಳ ಕಾಲ ಕಂಪಿಸಿದೆ. ಭೂಮಿ ಕಂಪಿಸುತ್ತಿದ್ದಂತೆ ಜನ ಮನೆಯಿಂದ ಓಡಿ ಬಂದಿದ್ದಾರೆ.
- Advertisement -