Friday, July 4, 2025

Latest Posts

ದೆಹಲಿ: ಪಥ ಸಂಚಲನದಲ್ಲಿ ವಿಭಿನ್ನ ಸ್ತಬ್ಧಚಿತ್ರಗಳ ಪ್ರದರ್ಶನ…!

- Advertisement -

Republic Day Special:

ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ದೆಹಲಿಯಲ್ಲಿ ಪಥಸಂಚಲನದ ಮೆರಗು ಮತ್ತಷ್ಟು ದೇಶ ಭಕ್ತಿಯನ್ನು ಮೂಡಿಸುತ್ತಿದೆ. ಜನ ಗಣ ಮನ ಉದ್ಘಾರ ಎಲ್ಲೆಡೆ ಕೇಳಿ ಬರುತ್ತಿದೆ. ಪಥ ಸಂಚಲನದಲ್ಲಿ ನೆರೆದಿರೋ  ಜನರಿಗೆ ಅನೇಕ ಟ್ಯಾಬ್ಲೋಗಳು ಮುದ ನೀಡಿವೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿವೆ.  ರಾಜ್ಯ, ಕೇಂದ್ರಾಡಳಿತ ಪ್ರದೇಶದ 17, ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೋಗಳು ಪ್ರದರ್ಶನವಾಗಿವೆ  . ಒಟ್ಟು ಬರೋಬ್ಬರಿ 23 ಟ್ಯಾಬ್ಲೋಗಳು ಭಾಗಿಯಾಗಿವೆ. ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ, ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ 17 ರಾಜ್ಯಗಳು ಭಾಗಿಯಾಗಿವೆ.

ಕರ್ನಾಟಕ ರಾಜ್ಯದಿಂದ ‘ನಾರಿ ಶಕ್ತಿ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನ:

ಕರ್ನಾಟಕ ರಾಜ್ಯದಿಂದ ‘ನಾರಿ ಶಕ್ತಿ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಕರ್ನಾಟಕದ ಸ್ತಬ್ಧಚಿತ್ರ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಭಾಗಿಯಾಗಿದೆ. 14 ವರ್ಷಗಳಿಂದ ಪಾಲ್ಗೊಂಡ ದೇಶದ ಏಕೈಕ ರಾಜ್ಯ ಕರ್ನಾಟಕ. ಈ ಬಾರಿ ಆದರ್ಶ ಮಹಿಳೆಯರ ಸಾಧನೆ ಅನಾವರಣವಾಗಿದೆ. ಮೂವರು ಮಹಿಳೆಯರಿಗೆ ಸ್ತಬ್ಧಚಿತ್ರ ಸಮರ್ಪಣೆ ಮಾಡಲಾಗಿದೆ. ಸ್ತಬ್ಧಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ, ಸಾಲುಮರದ ತಿಮ್ಮಕ್ಕ ಅವರ ಸಾಧನೆಗಳ ಪ್ರದರ್ಶನ ಮಾಡಲಾಗಿದೆ. ಹಾಗೇ ಗಿಡ-ಮರ ,ಬೆಟ್ಟ-ಗುಡ್ಡಗಳಿಂದ ಸ್ತಬ್ಧಚಿತ್ರ ಶೃಂಗಾರಗೊಂಡಿದೆ. ಮುಂಭಾಗದಲ್ಲಿ ಹೆರಿಗೆ ತಜ್ಞೆ ಸೂಲಗಿತ್ತಿ ನರಸಮ್ಮ ಚಿತ್ರ, ಚನ್ನಪಟ್ಟಣದ ಗೊಂಬೆ ಮಾದರಿಯ ತೊಟ್ಟಿಲು ಚಿತ್ರ ಮತ್ತು ನರಸಮ್ಮನವರು ಮಗುವನ್ನು ಎತ್ತಿಕೊಂಡಿರುವಂತೆ ಚಿತ್ರ ಪ್ರದರ್ಶನಗೊಂಡಿದೆ.

ಪಶ್ಚಿಮ ಬಂಗಾಳ ರಾಜ್ಯದಿಂದ ‘ದುರ್ಗಾ ಪೂಜೆಯ ವಿಶೇಷತೆ’ ಸ್ತಬ್ಧಚಿತ್ರ,:

ಪಶ್ಚಿಮ ಬಂಗಾಳ ರಾಜ್ಯದಿಂದ ‘ದುರ್ಗಾ ಪೂಜೆಯ ವಿಶೇಷತೆ’ ಸ್ತಬ್ಧಚಿತ್ರ, ಮಹಾರಾಷ್ಟ್ರದಿಂದ ಶಕ್ತಿಪೀಠಗಳಾದ ‘ಮೂರೂವರೆ ಶಕ್ತಪೀಠಗಳು ಮತ್ತು ಶ್ರೀಶಕ್ತಿ ಜಾಗರ್’ ಥೀಮ್​, ತಮಿಳುನಾಡಿನಿಂದ ‘ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ’ ಹೆಸರಿನ ಟ್ಯಾಬ್ಲೋ ಸ್ತಬ್ಧಚಿತ್ರಗಳು ಪ್ರದರ್ಶನವಾಗಿವೆ.

ಆಂಧ್ರಪ್ರದೇಶದ ವಿಶೇಷ  ಸ್ತಬ್ಧ ಚಿತ್ರ ಪ್ರಬಲ ತೀರ್ಥಂ ಧ್ಯೇಯದೊಂದಿಗೆ ಪ್ರದರ್ಶನವಾಗಿವೆ. ಅಸ್ಸಾಂ ರಾಜ್ಯದ ವೀರರ ಭೂಮಿ, ಆಧ್ಯಾತ್ಮಿಕತೆ ಸಂದೇಶದ  ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ,ಉತ್ತರಾಖಂಡ್ ರಾಜ್ಯದ ‘ಮಾನಸಖಂಡ’ ಸಂದೇಶದ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ. ಲಡಾಕ್​ನ ಪ್ರವಾಸೋದ್ಯಮ ಮತ್ತು ಸಂಯೋಜಿತ ಸಂಸ್ಕೃತಿ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ. ಲಡಾಕ್​ನ ಪ್ರವಾಸೋದ್ಯಮದ ಕುರಿತಾದ ವಿಶೇಷ ಸ್ತಬ್ಧ ಚಿತ್ರ ಪ್ರದರ್ಶನವಾಗಿವೆ. ಗುಜರಾತ್​ ರಾಜ್ಯದಿಂದ ‘ಕ್ಲೀನ್​ ಗ್ರೀನ್​ ಎನರ್ಜಿ ಸಮರ್ಥ ಗುಜರಾತ್’​ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಅರುಣಾಚಲ ಪ್ರದೇಶ​ ರಾಜ್ಯದಿಂದ ‘ಪ್ರವಾಸೋದ್ಯಮದ ನಿರೀಕ್ಷೆಗಳು’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಜಾರ್ಖಂಡ್​ ರಾಜ್ಯದಿಂದ ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲ ಬಾಬಾಧಾಮ್​ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಜಮ್ಮು-ಕಾಶ್ಮೀರ ರಾಜ್ಯದಿಂದ ‘ನಯಾ ಜಮ್ಮು ಮತ್ತು ಕಾಶ್ಮೀರ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಕೇರಳ ರಾಜ್ಯದಿಂದಲೂ ‘ನಾರಿ ಶಕ್ತಿ’ ಥೀಮ್ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಇಲಾಖೆಯಿಂದ ‘ನಶಾ ಮುಕ್ತ ಗುರಿ ನಮ್ಮ ಭಾರತ’ ಎಂಬ ಸಂದೇಶ ಸಾರುವ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

ಪಶ್ಚಿಮ ಬಂಗಾಳ ರಾಜ್ಯದಿಂದ ‘ದುರ್ಗಾ ಪೂಜೆಯ ವಿಶೇಷತೆ’ ಸ್ತಬ್ಧಚಿತ್ರ:

ಪಶ್ಚಿಮ ಬಂಗಾಳ ರಾಜ್ಯದಿಂದ ‘ದುರ್ಗಾ ಪೂಜೆಯ ವಿಶೇಷತೆ’ ಸ್ತಬ್ಧಚಿತ್ರ, ಮಹಾರಾಷ್ಟ್ರದಿಂದ ಶಕ್ತಿಪೀಠಗಳಾದ ‘ಮೂರೂವರೆ ಶಕ್ತಪೀಠಗಳು ಮತ್ತು ಶ್ರೀಶಕ್ತಿ ಜಾಗರ್’ ಥೀಮ್​, ತಮಿಳುನಾಡಿನಿಂದ ‘ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ’ ಹೆಸರಿನ ಟ್ಯಾಬ್ಲೋ ಸ್ತಬ್ಧಚಿತ್ರಗಳು ಪ್ರದರ್ಶನವಾಗಿವೆ.

ಉತ್ತರ ಪ್ರದೇಶದಿಂದ ಅಯೋಧ್ಯೆ ಕುರಿತ ‘ಅಯೋಧ್ಯೆ ದೀಪೋತ್ಸವ’ ಹೆಸರಿನ ವಿಶೇಷ ಸ್ತಬ್ಧಚಿತ್ರ ಪ್ರದರ್ಶನವಾಗಿದೆ. ಹರಿಯಾಣ ರಾಜ್ಯದಿಂದ ‘ಅಂತಾರಾಷ್ಟ್ರೀಯ ಗೀತ ಮಹೋತ್ಸವ’ ಹೆಸರಿನ ವಿಶೇಷ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

74ರ ಗಣರಾಜ್ಯೋತ್ಸವ ಸಂಭ್ರಮ…ಧ್ವಜಾರೋಹಣ ನೆರವೇರಿಸಿದ ದ್ರೌಪದಿ ಮುರ್ಮು..!

ಗಣರಾಜ್ಯೋತ್ಸವದ ಪ್ರಯುಕ್ತ ಶೌರ್ಯ ಪ್ರಶಸ್ತಿ ಪ್ರಕಟ…!

ದೆಹಲಿ ಸೇರಿ ಹಲವೆಡೆ ಭೂಕಂಪ..!

 

- Advertisement -

Latest Posts

Don't Miss