ದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಪರೀತ ಅವ್ಯವಸ್ಥೆಯ ನಡುವೆ, ಏರ್ ಇಂಡಿಯಾ ಮಂಗಳವಾರ ದೇಶೀಯ ಪ್ರಯಾಣಿಕರು ನಿರ್ಗಮನಕ್ಕೆ ಕನಿಷ್ಠ 3.5 ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪುವಂತೆ ಸಲಹೆಯನ್ನು ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ದೀರ್ಘ ಸಮಯದ ವರೆಗೆ ಕ್ಯೂ ನಿಲ್ಲುವುದು ಮತ್ತು ಚೆಕ್-ಇನ್ ಆಗಲು ವಿಳಂಬವಾಗುತ್ತಿತ್ತು ಎಂದು ಪ್ರಯಾಣಿಕರು ಸಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದರು. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ದೆಹಲಿ ವಿಮಾನಯಾನ ಸಂಸ್ಥೆ ಹೊಸ ಯೋಚನೆ ಮಾಡಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರು ತಮ್ಮ ವಿಮಾನಕ್ಕೆ ನಾಲ್ಕು ಗಂಟೆಗಳ ಮೊದಲು ತಲುಪಲು ಹೇಳಲಾಗಿದೆ.
ಆರೋಗ್ಯ ಇಲಾಖೆ ರೂಪಿಸಿರುವ 114 ‘ನಮ್ಮ ಕ್ಲಿನಿಕ್’ಗಳು ಇಂದಿನಿಂದ ಕಾರ್ಯಾರಂಭ
ತಡೆರಹಿತ ಭದ್ರತಾ ತಪಾಸಣೆಗಾಗಿ ಮತ್ತು ವೇಗವಾದ ಬೋರ್ಡಿಂಗ್‌ಗಾಗಿ ಸಂಪೂರ್ಣ ವೆಬ್ ಚೆಕ್-ಇನ್‌ಗಾಗಿ ಕ್ಯಾಬಿನ್ ಬ್ಯಾಗೇಜ್‌ನ ಒಂದು ಲಗೇಜ್ ಮಾತ್ರ ತೆಗೆದುಕೊಂಡು ಹೋಗುವಂತೆ ವಿಮಾನಯಾನ ಸಂಸ್ಥೆಯು ಎಲ್ಲಾ ಪ್ರಯಾಣಿಕರಿಗೆ ಸಲಹೆ ನೀಡಿದೆ.ವಿಮಾನ ನಿಲ್ದಾಣದಲ್ಲಿ ವೇಗದ ಚಲನೆಗಾಗಿ ಪ್ರಯಾಣಿಕರು ತಮ್ಮ ವಿಮಾನ ಹೊರಡುವ ಸಮಯಕ್ಕಿಂತ ಮೊದಲು ದೇಶೀಯ ಪ್ರಯಾಣಕ್ಕಾಗಿ ಕನಿಷ್ಠ 3.5 ಗಂಟೆಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ 4 ಗಂಟೆಗಳವರೆಗೆ ತಲುಪಲು ಸಲಹೆ ನೀಡಲಾಗುತ್ತದೆ” ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ಇಂದೂ ಕೂಡ ಬೆಂಗಳೂರಿನಲ್ಲಿ ಮಳೆ, ನಾಳೆಯಿಂದ ಕಡಿಮೆಯಾಗಲಿದೆ ವರುಣನ ಅಬ್ಬರ : ಹವಾಮಾನ ಇಲಾಖೆ