ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತ ಹೊರಟಿದೆ. ಒಂದು ದಿನಕ್ಕೆ ಸುಮಾರು ಒಂದು ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್‌ಗಳು ಕಂಡುಬರುತ್ತಿದೆ. ಇಲ್ಲಿಯವರೆಗೆ ದೆಹಲಿಯಲ್ಲಿ 27,600 ಕೊರೊನಾ ಪಾಸಿಟಿವ್ ಕೇಸ್‌ಗಳು ಕಂಡುಬಂದಿದ್ದು, ಜುಲೈ 31ರವೆಗೆ ದೆಹಲಿಯಲ್ಲಿ 5 ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಜುಲೈ 31ರ ತನಕ ದೆಹಲಿಯಲ್ಲಿ 5 ಲಕ್ಷಕ್ಕೂ ಅಧಿಕ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗಲಿದ್ದು, 80 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಬೇಕೆಂದಿದ್ದಾರೆ.

ಅಲ್ಲದೇ, ಜೂನ್ 15ರ ತನಕ 44 ಸಾವಿರ ಕೋವಿಡ್ ಕೇಸ್ ಹೆಚ್ಚಾಗಲಿದ್ದು, 6,600 ಬೆಡ್‌ಗಳ ಅವಶ್ಯಕತೆ ಇದೆ ಎಂದಿದ್ದಾರೆ. ಜೂನ್ 30ರವರೆಗೆ ಒಂದು ಲಕ್ಷ ಕೊರೊನಾ ಪಾಸಿಟಿವ್ ಕೇಸ್ ಆಗಲಿದ್ದು, 15 ಸಾವಿರ ಬೆಡ್‌ಗಳು ಬೇಕೆ ಬೇಕು ಎಂದಿದ್ದಾರೆ.
ಅಲ್ಲದೇ, ಜುಲೈ 15ರ ತನಕ ದೆಹಲಿಯಲ್ಲಿ 2ವರೆ ಲಕ್ಷ ಕೊರೊನಾ ಪಾಸಿಟಿವ್ ಕೇಸ್‌ಗಳು ಕಾಣಿಸಿಕೊಳ್ಳಲಿದ್ದು, 33ಸಾವಿರ ಬೆಡ್‌ಗಳ ಅವಶ್ಯಕತೆ ಇದೆ ಎಂದಿದ್ದಾರೆ.
ಒಟ್ಟಾರೆಯಾಗಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.