ಮಕ್ಕಳಿಗೆ ತ್ರಿವರ್ಣ ಧ್ವಜ ಹಂಚಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಮೋದಿ ತಾಯಿ

ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರ್ಯಾಲಿಗಳ ಮೂಲಕ ಎಲ್ಲೆಡೆ ತಿರಂಗವನ್ನು ಹಾರಿಸಲಾಗುತ್ತಿದೆ. ದೇಶ ಪ್ರೇಮಿಗಳು ತಮ್ಮ ಮನೆಯಲ್ಲಿ ತರಂಗವನ್ನು ಹಾರಿಸಿ ಅಮೃತ  ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬಾ ಮೋದಿಯವರು ತನ್ನ ಮನೆಯಲ್ಲಿ ಮಕ್ಕಳಿಗೆ ರಾಷ್ಟ್ರ ಧ್ವಜವನ್ನು ಹಂಚಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ದೇಶದಲ್ಲಿ ಪ್ರತಿಯೊಬ್ಬರೂ ತ್ರಿವರ್ಣ ಧ್ವಜವನ್ನು ಹಾರಿಸಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ.

About The Author