ದೆಹಲಿ: ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಆಡಳಿತವು ,ಮುಖ್ಯ ಗೇಟ್ ಗಳ ಹೊರಗೆ ಹುಡುಗಿಯರು ಅಥವಾ ಮಹಿಳೆಯರು ಒಂಟಿಯಾಗಿ ಅಥವಾ ಗುಂಪುಗಳಾಗಿ ಪ್ರವೇಶ ನಿಷೇಧಿಸುವ ಸೂಚನೆಯನ್ನು ಹಾಕಿದೆ. ಈ ವಿಚಾರ ಕೆಲವೆಡೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಶಾಹಿ ಇಮಾಮ್ ಮಧ್ಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಬರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಿದರು.
ಐಆರ್ ಸಿ, ಶಾರೀಕ್ ಕೃತ್ಯವನ್ನು ಸಮರ್ಥಿಸಿಕೊಂಡದ್ದರ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ
ಜಾಮಾ ಮಸೀದಿ ಪ್ರಾರ್ಥನಾ ಸ್ಥಳವಾಗಿದೆ ಇಲ್ಲಿ ಹುಡುಗಿಯರು/ಹೆಂಗಸರು ಮುಖ್ಯ ದ್ವಾರದ ಬಳಿ ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಈ ತರದ ಘಟನೆಗಳು ವರದಿಯಾದ ನಂತರವೇ ಈ ನಿರ್ಧಾರ ಮಾಡಿದ್ದು. ಪ್ರಾರ್ಥನೆಗೆ ಬರುವವರಿಗೆ ಮಾತ್ರ ಇಲ್ಲಿ ಪ್ರವೇಶವಿದೆ ಎಂದು ಶಾಹಿ ಇಮಾಮ್ ಹೇಳಿದರು. ಯಾವುದೇ ದಿನಾಂಕವನ್ನು ಹೊಂದಿರದ ಸೂಚನೆಗಳು ಕೆಲವು ದಿನಗಳ ಹಿಂದೆ ಮೂರು ಮುಖ್ಯ ಪ್ರವಶ ದ್ವಾರಗಳ ಹೊರಗೆ ಬಂದಿವೆ ಎಂದು ಆಡಳಿತ ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿವೆ.
ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದ ನಟ ಉಪೇಂದ್ರ : ಆತಂಕದಲ್ಲಿದ್ದ ಅಭಿಮಾನಿಗಳು