- Advertisement -
ಅಕ್ರಮ ಹಣ ವರ್ಗಾವಣೆ ಮತ್ತು ಹವಾಲ ಜಾಲ ಬಳಕೆ ಆರೋಪ ಎದುರಿಸುತ್ತಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೂನ್ 13 ರವರೆಗೆ ಕೋರ್ಟ್ ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಿದೆ.
ಪಿಎಂಎಲ್ಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಗುರುವಾರ ನಡೆದ ಕೋರ್ಟ್ ಕಲಾಪದಲ್ಲಿ ಇ.ಡಿ ಅಧಿಕಾರಿಗಳು ಜೈನ್ ಅವರನ್ನು ಹೆಚ್ಚುವರಿ ವಿಚಾರಣೆಗೆ ಒಳಪಡಿಸುವುದು ಅಗತ್ಯ ಇದೆ ಎಂದು ವಾದಿಸಿದರು.
ಜೈನ್ ನಿವಾಸ, ಕಛೇರಿ ಹಾಗೂ ಅವರ ವ್ಯವಹಾರಕ್ಕೆ ಸಂಬಂಧಿಸಿದ ಇತರ ಸ್ಥಳಗಳ ಮೇಲೆ ದಾಳಿ ನಡೆಸಿದ ಇ.ಡಿ ಅಧಿಕಾರಗಳಿಗೆ ಅಘೋಷಿತ 2.85 ಕೋಟಿ ರೂ.ನಗದು ಮತ್ತು 133 ಚಿನ್ನದ ನಾಣ್ಯಗಳು ಸಿಕ್ಕಿವೆ. ಏತನ್ಮಧ್ಯೆ, ಜೈನ್ ಅವರು ತಮ್ಮ ವಕೀಲರ ಮೂಲಕ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
- Advertisement -

