ನವದೆಹಲಿ: ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಕನೊಬ್ಬ ಅಜ್ಜಿಯ ಕತ್ತನೆ ಸೀಳಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಶಾಲಿಮಾರ್ ಬಾಗ್‍ದಲ್ಲಿ ನಡೆದಿದೆ.
ಬಾಲಕನು ಸರ್ಜಿಕಲ್ ಬ್ಲೇಡ್‍ನಿಂದ ಅಜ್ಜಿಯ ಕತ್ತು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ವೃದ್ಧೆ ಶಾಲಿಮಾರ್ ಬಾಗ್‍ನಲ್ಲಿ ಒಂಟಿಯಾಗಿ ವಾಸವಿದ್ದು, ಇತ್ತೀಚೆಗೆ ತಮ್ಮ ಮನೆ ಮಾರಾಟ ಮಾಡಿದ್ದರು.
ಪೊಲೀಸರು ತನಿಖೆ ಪ್ರಾರಂಭಸಿದ ಆರಂಭದಲ್ಲಿ ಕೊಲೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಕೊಲೆಯ ಹಿಂದಿನ ರಾತ್ರಿ ಯುವಕನೊಬ್ಬ ಬಿಳಿ ಟವೆಲ್‍ನಿಂದ ಮುಖವನ್ನು ಮುಚ್ಚಿಕೊಂಡು ಮನೆಗೆ ಪ್ರವೇಶಿಸುವುದನ್ನು ಪೊಲೀಸರು ಕಂಡುಕೊಂಡರು. ಈ ವೇಳೆ ವೃದ್ಧೆಯು ರಾತ್ರಿ ಹೊರಗೆ ಬಂದು ಮತ್ತೆ ಮನೆ ಪ್ರವೇಶಿಸಿದ್ದಾರೆ. ಈ ದೃಶ್ಯಾವಳಿಗಳನ್ನು ಕುಟುಂಬ ಸದಸ್ಯರಿಗೆ ತೋರಿಸಲಾಗಿದ್ದು, ಶಂಕಿತ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಪೊಲೀಸರು ಅಪ್ರಾಪ್ತ ಬಾಲಕನನ್ನು ಶಾಲೆಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಕೆಲ ಸ್ನೇಹಿತರ ಹತ್ತಿರ ಸಾಲದ ಹಣ ಬಾಕಿ ಉಳಿಸಿಕೊಂಡಿದ್ದು, ಅದನ್ನು ಪಡೆಯಲು ಅಜ್ಜಿಯ ಕೊಲೆಗೆ ಯೋಜನೆ ರೂಪಿಸಿದ್ದೆ ಎಂದಿದ್ದಾನೆ. ಸಾಹಿಲ್ ಸೈನಿ (22), ಮಯಾಂಕ್ ಸೈನಿ (21), ಸನ್ನಿ ಬಾಘೆಲ್ (19) ಮತ್ತು ಸಚಿನ್ ಸೈನಿ (28) ಎಂದು ಹೆಸರಿಸಿದ್ದು, ಕೊಲೆಯ ಯೋಜನೆಗೆ ಅವರು ಸಹಾಯ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು.
ಕೊಲೆಯಾದ ದಿನ ರಾತ್ರಿ ಮನೆಗೆ ನುಗ್ಗಿ ಅಜ್ಜಿ ಬಳಿ ಹಣ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ ಅಪ್ರಾಪ್ತೆ ಅಜ್ಜಿಯನ್ನು ತಳ್ಳಿ ಕತ್ತು ಸೀಳಿದ್ದಾನೆ. ಹಣವನ್ನು ಕದ್ದು ಸಾಲ ತೀರಿಸಿದ್ದಾನೆ. ನಂತರ, ಅವರು ಜೀವಂತವಾಗಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಆಕೆಯ ಸ್ಥಳವನ್ನು ಪರಿಷ್ಕರಿಸಿದ್ದಾನೆ.
ಆರೋಪಿಯಿಂದ ಸರ್ಜಿಕಲ್ ಬ್ಲೇಡ್, ಅಪ್ರಾಪ್ತರ ರಕ್ತದ ಕಲೆ ಇರುವ ಬಟ್ಟೆ, 50 ಸಾವಿರ ರೂಪಾಯಿ ನಗದು, ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.