Saturday, July 12, 2025

Latest Posts

ಡೆಲಿವರಿ ಬಾಯ್ ಗುಂಡು ಹಾರಿಸಿದ ಸಹೋದರರು…! ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!

- Advertisement -

Utthar Pradesh News:

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹರಿದ 200 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಪಿಜ್ಜಾ ಡೆಲಿವರಿ ಬಾಯ್‌ನ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಡೆಲಿವರಿ ಬಾಯ್‌ ಸಚಿನ್ ಕಶ್ಯಪ್ ಸ್ಥಿತಿ ಗಂಭೀರವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಹೋದರರು ಫೋನ್ ಮೂಲಕ ಪಿಜ್ಜಾವನ್ನು ಆರ್ಡರ್ ಮಾಡಿದ್ದು, ಪಿಜ್ಜಾ ಡೆಲಿವರಿ ಮಾಡಿದಾಗ ಆರೋಪಿ ನದೀಂ ನೀಡಿದ ಹಣದಲ್ಲಿ ಸಚಿನ್ ಮತ್ತು ಆತನ ಸಹಚರ ತಂಪು ಪಾನೀಯ ಖರೀದಿಸಲು ತೆರಳಿದ್ದರು. ಆದರೆ ನೋಟು ಹರಿದಿದ್ದರಿಂದ ಅದನ್ನು ಸ್ವೀಕರಿಸಲು ಅಂಗಡಿಯವರು ನಿರಾಕರಿಸಿದ್ದಾರೆ. ನಂತರ ಸಚಿನ್ ನದೀಂ ಬಾಗಿಲು ತಟ್ಟಿ ಹೊರಗೆ ಕರೆದು ನೋಟು ಬದಲಿಸುವಂತೆ ಕೇಳಿದರು. ಇದರಿಂದ ಕುಪಿತಗೊಂಡ ನದೀಂ ಸಚಿನ್ ಮೇಲೆ ದೌರ್ಜನ್ಯ ಎಸಗಿ ಬಳಿಕ ನದೀಂನ ಸಹೋದರ ಹೊರಗೆ ಬಂದು ಮತ್ತೆ ಕಂಟ್ರಿಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಇನ್ನು ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಚಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಶೀಘ್ರವೇ “ರೈತ ಶಕ್ತಿ ಯೋಜನೆ”ಗೆ ಚಾಲನೆ, ಸದ್ಯದಲ್ಲೇ ಡೀಸೆಲ್ ಸಹಾಯಧನ ಖಾತೆಗೆ ಜಮಾ

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ತಾರಾ ಮುನಿಯಪ್ಪ…?!

ಬೆಳಗಾವಿಯಲ್ಲಿ ಚಿರತೆ ಕಣ್ಣು ಮುಚ್ಚಾಲೆ..! ಯಾವುದೇ ಆಮಿಶಕ್ಕೂ ನಾ ಒಲ್ಲೆ ಎನ್ನುತ್ತಿದೆ..!

- Advertisement -

Latest Posts

Don't Miss