ಮೈಸೂರಿನ ಯುವಕನಲ್ಲಿ ಡೆಲ್ಟಾ ವೈರಸ್- ಸಚಿವ ಸುಧಾಕರ್

www.karnataka.net-ರಾಜ್ಯ- ಮೈಸೂರು- ರಾಜ್ಯದಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಮೈಸೂರಿನ ಓರ್ವ ಯುವಕನಲ್ಲಿ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಖಚಿತ ಮಾಹಿತಿ ವ್ಯಕ್ತಪಡಿಸಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೈಸೂರಿನ ಯುವಕನಿಗೆ ಡೆಲ್ಟಾ ವೈರಸ್ ಪತ್ತೆಯಾಗಿದ್ದು, ಸುಮಾರು 40 ಜನರ ಸ್ವಾಬ್ ಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇದೀಗ ಯುವಕನಿಗೆ ಸೋಂಕು ಇರುವುದು ಖಚಿತವಾಯ್ತು ಎಂದಿದ್ದಾರೆ.

About The Author