ಕರ್ನಾಟಕದ ಪ್ರಸಿದ್ಧ ನಂದಿನಿ ಬ್ರ್ಯಾಂಡ್ ತುಪ್ಪ ಈಗ ಅಂತರಾಷ್ಟ್ರೀಯ ಮಾರುಕಟ್ಟೆಗೂ ಕಾಲಿಟ್ಟಿದೆ. ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ನಂದಿನಿ ತುಪ್ಪ ರಫ್ತು ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಕಾವೇರಿ ನಿವಾಸದಲ್ಲಿ ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಂದಿನಿ ಉತ್ಪನ್ನಗಳಿಗೆ ದೇಶ–ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ನಂದಿನಿ ತುಪ್ಪದ ಗುಣಮಟ್ಟಕ್ಕೆ ಈಗಾಗಲೇ ರಾಜ್ಯಗಳಲ್ಲೂ ಮೆಚ್ಚುಗೆ ಇದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
KMF ಇದೀಗ ಮೂರು ದೇಶಗಳಿಗೆ ಒಟ್ಟು 15 ಟನ್ ನಂದಿನಿ ತುಪ್ಪವನ್ನು ರಫ್ತು ಮಾಡಲಿದೆ. ಮೈಸೂರಿನ ಮೂಲದ ಕುಮಾರ ಎಂಬುವವರು ಅಮೆರಿಕಾದಲ್ಲಿ ನೆಲೆಸಿದ್ದು, ವಿದೇಶ ರಫ್ತು ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಹಾಗೂ KMF ಗೆ ಸಿಎಂ ಶುಭಾಶಯಗಳನ್ನು ತಿಳಿಸಿದರು.
ಕೊನೆಯ ಕೆಲವು ತಿಂಗಳ ಹಿಂದೆ ನಂದಿನಿ ತುಪ್ಪದ ದರ ಮೊದಲು ಇದು 610 ರೂ ಇತ್ತು. GST ಇಳಿಕೆ ಹಿನ್ನೆಲೆಯಲ್ಲಿ 40 ರೂ ಕಡಿತ ಮಾಡಲಾಗಿದ್ದರೂ, ಇದೀಗ ಮರು ಏರಿಕೆ ಮಾಡಿ 1 ಲೀಟರ್‌ಗೆ 700 ರೂ ನಿಗದಿಪಡಿಸಲಾಗಿದೆ. ಇದ್ದಿತು.
ಈ ವರ್ಷಕ್ಕೆ GST ಮತ್ತು ರಾಜ್ಯದ ಸದಸ್ಯ ಹಾಲು ಒಕ್ಕೂಟಗಳು ಒಟ್ಟಾರೆ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡಿದ್ದು, 46 ಕೋಟಿ ರೂ ವಹಿವಾಟು ದಾಖಲಿಸಿದ್ದಾರೆ. ಇದು KMF ಇತಿಹಾಸದಲ್ಲಿ ಮಹತ್ವದ ಸಾಧನೆ ಎಂದು ಸಂಸ್ಥೆ ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ

