www.karnatakatv.net: ರಾಯಚೂರು : ಸಿಂಧನೂರು ಕೇಂದ್ರ ನಿಲ್ದಾಣದಿಂದ ಪಿಡ್ಲೂಡಿ ಕ್ಯಾಂಪ್ ನ ವರೆಗೆ ಮತ್ತು ತಾಲೂಕಿನ ವಿವಿಧ ಹಳ್ಳಿಗಳಿಗೆ ಸಮರ್ಪಕ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ಎಸ್ಎಫ್ಐ ಪದಾಧಿಕಾರಿಗಳು ಸಿಂಧನೂರು ಘಟಕ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಇಂದು ಸಿಂಧನೂರಿನ ಪಿಡ್ಲೂಡಿ ಕ್ಯಾಂಪ್ ನಲ್ಲಿರುವ ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ 600ಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬಂದು ತಮ್ಮ ಕಾಲೇಜುಗಳಿಗೆ ತೆರಳಬೆಕಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಕಾರಣ ಬಸ್ಸಿನ ಸಮಸ್ಯೆ ಹೆಚ್ಚಾಗಿದೆ . ಬಾಲಕಿಯರ ಮತ್ತು ಬಾಲಕರ ಕಾಲೇಜುಗಳಿಗೆ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಬರುತ್ತಾರೆ. ಹಾಗಾಗಿ ಈ ಮಾರ್ಗಕ್ಕೆ ಪ್ರತ್ಯೇಕವಾಗಿ ಒಂದು ಸಿಟಿ ಬಸ್ ಸೌಲಭ್ಯವನ್ನು ಬೆಳಗ್ಗೆ 8:40ಕ್ಕೆ ಮತ್ತು 9:20ಕ್ಕೆ ಎರಡು ಬಾರಿ ಮತ್ತು ಮಧ್ಯಾನ 2:20ಕ್ಕೆ ಮತ್ತು 4:10ಕ್ಕೆ ಒಂದು ಬಾರಿ ಬಿಡಬೇಕು.
ಹಾಗೂ ಸಿಂಧನೂರು ತಾಲೂಕಿನಲ್ಲಿರುವ RH. NO, 3.ಕ್ಯಾಂಪ್ ನಿಂದ ಸಿಂಧನೂರಿನಲ್ಲಿರುವ ವಿವಿಧ ಕಾಲೇಜುಗಳಿಗೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಮತ್ತು ಈ ಮೇಲೆ ತೊರಿಸಲಾದ ಎಲ್ಲಾ ಮಾರ್ಗಗಳಿಗೆ ಆದಷ್ಟು ಬೇಗನೆ ಬಸ್ ಸೌಲಭ್ಯವನ್ನು ಕಲ್ಪಿಸಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಒಂದು ವೇಳೆ ಈ ಎಲ್ಲಾ ಮಾರ್ಗಗಳಿಗೆ ಬಸ್ ಸೌಲಭ್ಯವನ್ನು ಒದಗಿಸದೆ ಇದ್ದಲ್ಲಿ ಅಥವಾ ನಿರ್ಲಕ್ಷಿಸಿದರೆ ಎಲ್ಲಾ ವಿದ್ಯಾರ್ಥಿಗಳೂಂದಿಗೆ ಜೊತೆಗೂಡಿ ಭಾರತ ವಿದ್ಯಾರ್ಥಿ ಫೆಡರೇಷನ್ ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಅನಿಲ್ ಕುಮಾರ್ , ಕರ್ನಾಟಕ ಟಿವಿ- ರಾಯಚೂರು