www.karnatakatv.net :ತುಮಕೂರು : ವಿಧಾನ ಪರಿಷತ್ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 2022 ರಲ್ಲಿ ನಡೆಯಲಿರುವ ಚುನಾವಣೆಗಾಗಿ ಟಿಕೇಟ್ ಲಾಭಿ ಜೋರಾಗಿದೆ. ಈಚೆಗೆ ನಾಯಕ ಸಮುದಾಯಕ್ಕೆ ಟಿಕೇಟ್ ಕೊಡುವಂತೆ ಒಕ್ಕಲಿಗ ಸಮುದಾಯ ಒಗ್ಗಟ್ಟಿನ ಪ್ರದರ್ಶನ ಮಾಡಿತ್ತು. ಈಗ ಎಸ್ಸಿಯ ಎಡಗೈ ಸಮುದಾಯ ತಮಗೆ ಟಿಕೇಟ್ ಕೊಡುವಂತೆ ಒತ್ತಾಯಿಸಿದೆ.
ತುಮಕೂರು ಕಾಂಗ್ರೆಸ್ ಪಾಳಯದಲ್ಲಿ ವಿಧಾನ ಪರಿಷ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ಯಲಚವಾಡಿ ನಾಗರಾಜ್ ತಮಗೇ ಈ ಬಾರಿ ಟಿಕೇಟ್ ಅಂತಾ ಓಡಾಡಿಕೊಂಡಿದ್ದಾರೆ. ಕಳೆದ ಬಾರಿ ಸ್ಫರ್ಥಿಸಿ ಸೋತಿದ್ದ ಮಾಜಿ ಶಾಸಕ ಕೆಎನ್.ರಾಜಣ್ಣ ಪುತ್ರ ರಾಜೇಂದ್ರ ಈಗ ಈ ಬಾರಿಯೂ ಅಕಾಂಕ್ಷಿ. ಈ ನಡುವೆ ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಚಮಾರಯ್ಯ, ಉದ್ಯಮಿ ಡಿಟಿ ವೆಂಕೇಶ್, ನ್ಯಾಯವಾದಿ ರಾಣಿಚೆನ್ನಮ್ಮ ಕೂಡ ರೇಸಿನಲ್ಲಿದ್ದಾರೆ. ಆದ್ರೆ ಈ ಮೂವರಲ್ಲಿ ಸಮುದಾಯದ ಯಾರೊಬ್ಬರಿಗಾದರೂ ಟಿಕೇಟ್ ಕೊಡಬೇಕು ಅನ್ನೋದು. ಈ ಬಗ್ಗೆ ತುಮಕೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮುಖಂಡ ಒಗ್ಗಟ್ಟಿನ ಮಂತ್ರಿ ಜಪಿಸಿದ್ದಾರೆ.
ಎರಡು ಬಾರಿ ಜಿ.ಪಂ. ಸದಸ್ಯನಾಗಿ ಸ್ಥಳೀಯ ಸಂಸ್ಥೆ ಸಮಸ್ಯೆ, ಶಿಕ್ಷಣ ರಂಗ ಸಮಸ್ಯೆಯ ಬಗ್ಗೆ ಅರಿವಿದೆ. ಪರಿಷತ್ ಹಿರಿಯರ ಮನೆಯಾಗಿದ್ದು, ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದರೆ ನಮ್ಮ ಜಿಲ್ಲೆಯವರು ಒಪ್ಪುವುದಿಲ್ಲ. ಮಾದಿಗ ಸಮುದಾಯದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಅನ್ನೋದು ಜಿ.ಪಂ ಸದಸ್ಯ ಕೆಂಚಮಾರಯ್ಯ ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಉದ್ಯಮಿ ಡಿ.ಟಿ.ವೆಂಕಟೇಶ್, 75 ವರ್ಷಗಳ ಇತಿಹಾಸದಲ್ಲಿ ಮಾದಿಗರನ್ನ ಎಲ್ಲ ಪಕ್ಷಗಳು ಮತಕ್ಕೆ ಬಳಸಿಕೊಂಡಿವೆ. ಸಮಾಜದ ಉಳಿವಿಗೆ ಹೋರಾಡ ಬೇಕಿದೆ. ಜಿಲ್ಲೆಯಲ್ಲಿ ಐದು ಲಕ್ಷ ಮತದಾರರು ಇರುವ ಸಮುದಾಯಕ್ಕೆ ಸ್ಥಳೀಯ ಪರಿಷತ್ ನಲ್ಲಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಮಾದಿಗ ಸಮುದಾಯದ ಮಹಿಳೆಯರಿಗೆ ಈ ವರೆಗೆ ವಿಧಾನ ಪರಿಷತ್ ನಲ್ಲಿ ಪ್ರಾತಿನಿಧ್ಯ ನೀಡಿಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಟಿಕೆಟ್ ನೀಡಬೇಕೆಂದು ಅನ್ನೋ ಒತ್ತಾಯ ರಾಣಿ ಚೆನ್ನಮ್ಮ ಅವರದ್ದು.
ಮೂವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರು ಸಹ ಅವರ ಗೆಲುವಿಗೆ ಶ್ರಮಿಸಲು ಸಮುದಾಯ ತೀರ್ಮಾನಿಸಿದಂತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು, ಕಾಂಗ್ರೆಸ್ ಈ ಸಮುದಾಯಕ್ಕೆ ಮನ್ನಣೆ ನೀಡಿಲ್ಲ. ಆಂಜಿನಪ್ಪ, ಚೆನ್ನಿಗರಾಮಯ್ಯ ಅವರನ್ನು ಬಿಟ್ಟರೆ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ, ಸಮುದಾಯದ ಮತ ಪಡೆಯಲು ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಇದೆ. ಇದನ್ನ ಕಾಂಗ್ರೆಸ್ ಯಾವ ರೀತಿ ಪರಿಗಣಿಸಿ ಟಿಕೇಟ್ ಯಾರಿಗೆ ನೀಡಲಿದೆ ಅನ್ನೋದು ಕುತೂಹಲ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ – ತುಮಕೂರು




