www.karnatakatv.net: ಅನಾರೋಗ್ಯದಿoದ ದೆಹಲಿಯ ಏಮ್ಸ್ ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವರಿಗೆ ಡೆಂಗ್ಯೂ ಸೋಂಕು ತಗುಲಿರೋದು ಪತ್ತೆಯಾಗಿದೆ.
ಇನ್ನು ಡೆಂಗ್ಯೂ ಸೋಂಕಿನಿoದಾಗಿ ಪ್ಲೇಟ್ ಲೆಟ್ಸ್ ಕುಸಿದಿತ್ತು. ಆದ್ರೆ ಚಿಕಿತ್ಸೆ ಪಡೆಯುತ್ತಿರೋದ್ರಿಂದ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಂಡುಬoದಿದೆ. ಇನ್ನು ಮನಮೋಹನ್ ಸಿಂಗ್. ತೀವ್ರ ಜ್ವರ, ಸುಸ್ತು ಮತ್ತು ಎದೆನೋವಿನಿಂದಾಗಿ ಕಳೆದ ಬುಧವಾರದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಮ್ಸ್ನ ಕಾರ್ಡಿಯೋ-ನ್ಯೂರೋ ಸೆಂಟರ್ನಲ್ಲಿರುವ ಖಾಸಗಿ ವಾರ್ಡ್ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ರು.
ಮನಮೋಹನ್ ಸಿಂಗ್ ಆರೋಗ್ಯ ಕುರಿತಾಗಿ ಹೃದ್ರೋಗ ತಜ್ಞರು ನಿಗಾವಹಿಸಿದ್ದರು. ಇದೀಗ ಅವರಲ್ಲಿ ಡೆಂಗ್ಯೂ ಇರುವುದು ಗೊತ್ತಾಗಿದ್ದು, ವೈದ್ಯ ನಿತೀಶ್ ನಾಯಕ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮನಮೋಹನ್ ಸಿಂಗ್ ಏಪ್ರಿಲ್ ನಲ್ಲಿ ಕೊರೊನಾಕ್ಕೆ ಒಳಗಾಗಿದ್ದರು. ಆಗಲೂ ಸಹ ಏಮ್ಸ್ಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶೀಘ್ರ ಗುಣಮುಖರಾಗಲಿ ಅಂತ ಟ್ವೀಟ್ ಮೂಲಕ ಹಾರೈಸಿದ್ದಾರೆ.