Saturday, July 27, 2024

Latest Posts

ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಡಂಗುರ- ಸುತ್ತಮುತ್ತ ಸ್ವಚ್ಛತೆಯಿರಲಿ ಎಚ್ಚರ..!!

- Advertisement -

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ತನ್ನ ಡಂಗುರ ಸಾರುತ್ತಿದೆ. ರಾಜ್ಯಾದ್ಯಂತ ಡೆಂಗೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾರಿಗೆ ಯಾವಾಗ ಬೇಕಾದ್ರೂ ಡೆಂಗೂ ಸೋಂಕು ತಗುಲಬಹುದು ಅಂತ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಡೆಂಗೂ ತನ್ನ ಅಟ್ಟಹಾಸ ಮೆರೆಯಲು ಸಿದ್ಧವಾಗಿ ನಿಂತಿದೆ. ಇತ್ತೀಚಿನ ವರದಿಯ ಪ್ರಕಾರ ಜನವರಿ ತಿಂಗಳಿನಿಂದ ರಾಜ್ಯದಲ್ಲಿ ಒಟ್ಟು 18,005 ಶಂಕಿತ ಡೆಂಗ್ಯೂ ಪೀಡಿತರಲ್ಲಿ ಸುಮಾರು 1635 ಮಂದಿಯಲ್ಲಿ ಡೆಂಗ್ಯೂ ಸೋಂಕು ದೃಢಪಟ್ಟಿದ್ರೆ, ಬೆಂಗಳೂರಿನ 2257 ಮಂದಿ ಶಂಕಿತ ಸೋಂಕಿಗೆ ಒಳಪಟ್ಟಿದ್ದಾರೆ.

ಹೀಗಾಗಿ ಆರೋಗ್ಯ ಇಲಾಖೆ ಸಾರ್ವನಿಕರಿಗೆ ಸ್ವಚ್ಛತೆ ಕಾಪಾಡಿಕೊಂಡು ಮಹಾಮಾರಿ ಡೆಂಗ್ಯೂ ಭೀತಿಯಿಂದ ದೂರವಿರಿ ಅಂತ ಅರಿವು ಮೂಡಿಸುತ್ತಿದೆ. ನಿಂತ ನೀರುಗಳಲ್ಲಿ ಉತ್ಪತ್ತಿಯಾಗುವ ಡೆಂಗ್ಯೂ ಸೋಂಕು ಹರಡುವ ಸೊಳ್ಳೆಗಳು ಕ್ಷಿಪ್ರಗತಿಯಲ್ಲಿ ಸೋಂಕು ಹಬ್ಬಿಸುತ್ತವೆ. ಒಮ್ಮೆ ಡೆಂಗ್ಯೂ ಸೋಂಕು ತಗುಲಿದರೆ ನಮ್ಮ ದೇಹದ ರಕ್ತದ ಕಣಗಳಲ್ಲಿರುವ ಪ್ಲೇಟ್ ಲೆಟ್ ಗಳ ಸಂಖ್ಯೆ ಇಳಿಕೆಯಾಗಿ ನಮ್ಮನ್ನು ಹೈರಾಣಾಗಿಸುತ್ತವೆ. ಕೆಲವರು ಸಾವಿನ ಮನೆಯ ಬಾಗಿಲು ಬಡಿದು ಅದೃಷ್ಟವಶಾತ್ ಬದುಕುಳಿದರೆ, ಇನ್ನೂ ಹಲವರು ದೇಹದಲ್ಲಿನ ವೈರಾಣುಗಳ ಅಟ್ಟಹಾಸಕ್ಕೆ ಪ್ರಾಣವನ್ನೇ ತೆತ್ತಿದ್ದಾರೆ. ಹೀಗಾಗಿ ಈ ಡೆಂಗ್ಯೂ ರೋಗ ಹರಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕುವ ಕೆಲಸವನ್ನು ಪ್ರತಿಯೊಬ್ಬರು ಮಾಡಲೇಬೇಕಿದೆ.

ಡೆಂಗ್ಯೂ ಸೊಳ್ಳೆಗಳ ಮೂಲ ಎಲ್ಲಿ?

ಸಾಮಾನ್ಯವಾಗಿ ನಾವು ಮನೆಯಂಗಳದಲ್ಲಿಡುವ ಹೂ ಕುಂಡಗಳು, ಗಿಡಗಳನ್ನು ಬೆಳೆಸುವ ಪಾಟ್ ಗಳು, ಫ್ರಿಡ್ಜ್ ನ ತಳ ಭಾಗದಲ್ಲಿ ನೀರು ನಿಲ್ಲುವ ಸ್ಟೋರೇಜ್ ಗಳೇ ಡೆಂಗ್ಯೂ ಸೊಳ್ಳೆಗಳಿಗೆ ಹೇಳಿ ಮಾಡಿಸಿದ ಜಾಗಗಳು. ಹೀಗಾಗಿ ಆಗ್ಗಾಗ್ಗೆ ಕೀಟ ನಾಶಕ ಸಿಂಪಡಿಸೋದಾಗಲೀ, ಅಥವಾ ಅವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಮನೆ ಮಂದಿಯ ಮೇಲೆಲ್ಲಾ ಡೆಂಗ್ಯೂ ಸೊಳ್ಳೆಗಳು ಪ್ರಹಾರ ನಡೆಸುವ ಅವಕಾಶವೇ ಹೆಚ್ಚಾಗಿರುತ್ತದೆ. ಅಲ್ಲದೆ ಮನೆಯ ಸುತ್ತಮುತ್ತಲೂ ಯಾವುದೇ ನಿರುಪಯುಕ್ತ ವಸ್ತುಗಳೊಳಗೆ ನೀರು ನಿಲ್ಲದಂತೆ ನೋಡಿಕೊಳ್ಳೋದು ಅಷ್ಟೇ ಮುಖ್ಯ.

ಇನ್ನು ಯಾವುದೇ ವ್ಯಕ್ತಿಯಲ್ಲಿ ಮೂರು ದಿನಗಳಿಗಿಂತ ಹೆಚ್ಚಾಗಿ ಜ್ವರ ಬಾಧಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ. ಇಂತಹ ವ್ಯಕ್ತಿಗಳ ರಕ್ತ ಪರೀಕ್ಷೆ ಮಾಡಿಸೋ ಮೂಲಕ ಕೂಡಲೇ ಸೋಂಕು ತಗಲಿರುವುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಲ್ಲದೆ ಮನೆಯ ಕಿಟಕಿ-ಬಾಗಿಲುಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ಹೊರಗಡೆ ಹೋಗುವಾಗ ಮೈತುಂಬಾ ಬಟ್ಟೆಗಳನ್ನು ಧರಿಸುವುದರಿಂದ ಸೊಳ್ಳೆ ಕಡಿತದಿಂದ ನಿಮ್ಮನು ನೀವು ರಕ್ಷಿಸಿಕೊಳ್ಳಬಹುದು.

ಚಂದ್ರಗ್ರಹಣ- ಈ ರಾಶಿಗಳಿಗೆ ಶುಕ್ರದೆಸೆ ಶುರು..!! ತಪ್ಪದೇ ಈ ವಿಡಿಯೋ ನೋಡಿ

https://www.youtube.com/watch?v=eimczXstinQ

- Advertisement -

Latest Posts

Don't Miss