www.karnatakatv.net :ತುಮಕೂರು : ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಸಾವು ಮತ್ತು ಪಾಸಿಟಿವ್ ಪ್ರಕರಣದಿಂದ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿ ಇತ್ತು. ಜಿಲ್ಲಾಡಳಿತದ ಬಿಗಿ ಕ್ರಮದಿಂದ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಈಗ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಹೌದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ, ಪಾಸಿಟಿವಿಟಿ ರೇಟ್ 50 ಕ್ಕೆ ಬಂದಿದೆ. ಕೋವಿಡ್ ನಿಂದಾಗಿ ಜಿಲ್ಲೆಯ ಜನ ಸ್ವಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತಿದ್ದಾರೆ ಎನ್ನುವಷ್ಟರಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚುತಿದ್ದು ಜನರಲ್ಲಿ ಇನ್ನಷ್ಟು ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಪ್ರಕರಣ ಹೆಚ್ಚಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ 15-20 ದಿನದಿಂದ ನಿರಂತರವಾಗಿ ಮಳೆ ಸುರಿದಿದ್ದರಿಂದ ಈ ಖಾಯಿಲೆಗಳು ಉಲ್ಬಣಗೊಂಡಿದೆ ಎನ್ನಲಾಗಿದ್ದು, ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಜೊತೆಗೆ ಮಹಾಮಾರಿ ಮಲೇರಿಯಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದೆರಡು ತಿಂಗಳಲ್ಲಿ 70ಕ್ಕೂ ಹೆಚ್ಚು ಜನರು ಮಲೇರಿಯಾಗೆ ತುತ್ತಾಗಿದ್ದಾರೆ. ಆದರೆ ಕೋವಿಡ್ ಹೊರತುಪಡಿಸಿ ಡೆಂಗ್ಯೂ ಚಿಕೂನ್ ಗುನ್ಯಾ, ಮಲೇರಿಯಾದಿಂದ ಯಾರೂ ಸಾವನಪ್ಪಿಲ್ಲಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಕ್ತಕ್ರಮ ಕೈಗೊಳ್ಳುತ್ತಿದೆ.
ದರ್ಶನ್ ಕೆಡಿಆರ್, ಕರ್ನಾಟಕ ಟಿವಿ- ತುಮಕೂರು