state story
ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕಿಯಿಂದಾಗಿ ಸಾಮಾನ್ಯ ಜನರು ಮತ್ತು ಸರ್ಕಾರಿನೌಕರರಿಗೆ ತುಂಬಾ ಕಷ್ಟವಾಗಿದೆ . ಜನ ಜೀವನ ಅರೆಬರೆಯ ಆಗಿದೆ.ಇ ರೀತಿಯ ಷ್ಟವನನು ನೋಡಿದ ಸರ್ಕಾರಿ ನೌಕರರು ಈಗ ನೌಕರರ ಅನುಕೂಲಕ್ಕಾಗಿ ದಿಪಾರ್ಟಮೆಂಟಲ್ ಸ್ಟೋರ್ ಒಂದನ್ನು ತೆರೆದಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಪಾಕೆಟ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಫ್ಯಾಮಿಲಿ ಮಾರ್ಟ್ ವೊಂದನ್ನು ಆರಂಭಿಸುತ್ತಿದ್ದು, ಶೇ.10-60ರಷ್ಟು ರಿಯಾಯಿತಿಯಲ್ಲಿ ಸರ್ಕಾರಿ ನೌಕರರು ಅಗತ್ಯ ವಸ್ತುಗಳು ಮತ್ತು ದಿನಸಿ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ.ಸರ್ಕಾರಿ ನೌಕರರ ಸಂಘವು ಆರಂಭಿಸುತ್ತಿರುವ ಈ ಮಾರ್ಟ್, ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ರಂತೆಯೇ ಇರುತ್ತದೆ, ದಿನಸಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳು ಸೇರಿದಂತೆ ದೈನಂದಿನ ಬಳಕೆಗೆ ಗುಣಮಟ್ಟದ ಉತ್ಪನ್ನಗಳು ಈ ಮಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.72 ಇಲಾಖೆಗಳಲ್ಲಿ 5.2 ಲಕ್ಷ ಸರ್ಕಾರಿ ನೌಕರರನ್ನು ಹೊಂದಿದ್ದು, ಮಾಜಿ ನೌಕರರು ಅವರ ಪತ್ನಿಯಂದಿರು ಕೂಡ ಈ ಮಾರ್ಟ್’ನ್ನು ಬಳಕೆ ಮಾಡಬಹುದಾಗಿದೆ., ಶಿವಮೊಗ್ಗದಲ್ಲಿ ಮೊದಲ ಮಾರ್ಟ್ ಉದ್ಘಾಟನೆಯಾಗಲಿದೆ. ಫೆ.4ರಂದು ರಾಜ್ಯಮಟ್ಟದ ಸರ್ಕಾರಿ ನೌಕರರ ಸಮಾವೇಶ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಮಾರ್ಟ್ ಉದ್ಘಾಟನೆಗೊಳ್ಳಲಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.