ಬೆಳಗಾವಿ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 15 ಕೋಟಿ ರೂ. ಮಾತ್ರ ಅನುದಾನ ಬಂದಿದೆ. ಆದರೆ ಗಡಿನಾಡಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅಡೆತಡೆಯಿಲ್ಲ. ಗಡಿನಾಡಿನಲ್ಲಿ ಜಾನಪದ ಸಾಂಸ್ಕೃತಿಕ ಉತ್ಸವ, ಗಡಿನಾಡಿನ ಹೋರಾಟಗಾರರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಯೋಚಿಸಿದ್ದೇವೆ. ಗಡಿಯಲ್ಲಿ ಕನ್ನಡದ ವಾತಾವರಣ ನಿರ್ಮಿಸಲು, ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದ ಗಡಿ ಪ್ರದೇಶದ ಗಡಿ ನಾಡ ಕನ್ನಡ ಭವನಕ್ಕೆ ಭೇಟಿ ನೀಡಿದ್ದೆ.ಅಲ್ಲಿ ಕನ್ನಡಿಗರ ಸ್ಥಿತಿ ಸರಿಯಿಲ್ಲ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ಅವರು ಇನ್ನು ಬೆಳಗಾವಿ ತಾಲೂಕಿನ ಯಳ್ಳೂರಿಗೆ ತೆರಳಿ ಗ್ರಂಥಾಲಯಕ್ಕೆ ಅನುದಾನ ನೀಡಿದ್ದ ಚಾಂಗಲೇಶ್ವರಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದೆನೆ.
ಇನ್ನು ಗಡಿನಾಡಿನಲ್ಲಿ ಕರ್ನಾಟಕದ ಕಾವಲಿಗೆ ವ್ಯವಸ್ಥೆ ಇಲ್ಲ. ಗಡಿ ನಾಡಿನ ನಾಲ್ಕೂ ಕಡೆ ಕರ್ನಾಟಕಕ್ಕೆ ಸ್ವಾಗತ ಕಮಾನು ಆಗಬೇಕು ಎಂದು ನಿರ್ಧರಿಸಿದ್ದೇವೆ. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ,ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಶ್ವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಿದ್ದೇನೆ. ಸಭೆ ಮಾಡಿ ಸಲಹೆ, ಸೂಚನೆ ಪಡೆದಿದ್ದೇನೆ ಎಂದು ತಿಳಿಸಿದರು.
ನಂತರ ಗಡಿ ಭಾಗದ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಲೇಬೇಕು. ಅಭಿವೃದ್ಧಿ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸಾಂಸ್ಕøತಿಕ ಜಾಗೃತಿಯ ಪ್ರಜ್ಞೆ ಜಾಗೃತವಾಗಬೇಕು.
ಗ್ರಾಮ ಪಂಚಾಯಿತಿಗಳಲ್ಲಿ ಸಾಂಸ್ಕøತಿಕ ನಿಧಿ ಸ್ಥಾಪಿಸಬೇಕು. ಪ್ರಯೋಗ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಅವರಿಗೆ ತಿಳಿಸಿದ್ದೇನೆ. ಗ್ರಾಮಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಉಳಿವು, ಬೆಳವಣಿಗೆ ಆದರೆ ನಮ್ಮ ಸಂಸ್ಕøತಿ, ಪರಂಪರೆ ಉಳಿಯುತ್ತದೆ. ಪಂಚಾಯಿತಿಗಳಲ್ಲಿ ವಾಚನಾಲಯಗಳು ಸದ್ಬಳಕೆಯಾಗುತ್ತಿಲ್ಲ. ಕನ್ನಡ ಪತ್ರಿಕೆಗಳು ಅಲ್ಲಿ ಸಿಗುವಂತಾಗಬೇಕು.ಓದುಗರು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಇನ್ನು ಗಡಿ ಭಾಗದಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಜೀವನಕ್ಕೆ ಅವಕಾಶ ನೀಡಲು ಗಡಿ ಮಹಿಳಾ ಸ್ವಾವಲಂಬನೆ, ಸಾಂಸ್ಕøತಿಕ ಉತ್ಸವ ಮಾಡಲು ನಿರ್ಧರಿಸಿದ್ದೇವೆ. ಗಡಿ ನಾಡಿನಲ್ಲಿ ದಾರ್ಶನಿಕರ ಸ್ಮಾರಕಗಳ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದೆ. ಅವುಗಳ ಅಭಿವೃದ್ಧಿ ಆಗಬೇಕು. ಪ್ರಾಧಿಕಾರ ತನ್ನ ಪಾಲಿನ ಕರ್ತವ್ಯ ನಿರ್ವಹಿಸಲಿದೆ. ಗಡಿಭಾಗದ ಜಾನಪದ ಕಲೆಗಳ ಅಧ್ಯಯನ ಮಾಡಲು ಸೂಚಿಸಿದರು.
ಇನ್ನು ಗಡಿಯಲ್ಲಿ ಕನ್ನಡ ಶಿಕ್ಷಕರ ಕೊರತೆ ಇದೆ. ಸ್ನಾತಕೋತ್ತರ ಪದವಿ ಪಡೆದವರ ನೇಮಕ ಮಾಡಿಕೊಂಡು ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು.
ಇನ್ನು ರಾಜ್ಯದ ಗಡಿ ನಾಡಿನ ಕನ್ನಡಿಗರ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಈ ಕುರಿತು ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ. ಗಡಿ ಭಾಗದ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಕಡಿಮೆ ಇವೆ. ಇಲ್ಲಿಯ ಸಮಸ್ಯೆಗಳು, ಕೊರತೆಗಳ ಅಧ್ಯಯನ ಆಗಬೇಕಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರ 19 ಜಿಲ್ಲೆಗಳು, 63 ತಾಲೂಕು, 6 ನೆರೆ ರಾಜ್ಯಗಳ ವ್ಯಾಪ್ತಿ ಹೊಂದಿದೆ. ಈ ಪ್ರದೇಶದ ಜನರಿಗೆ ದೊರೆಯುವ ಸವಲತ್ತು, ಅವಕಾಶಗಳ ಬಗ್ಗೆ ಮಾಹಿತಿ ಪಡೆಯಬೇಕು. ಕೊರೋನಾ ಹಿನ್ನೆಲೆಯಲ್ಲಿ ಸರಕಾರದಿಂದ 15 ಕೋಟಿ ರೂ. ಬಂದಿದೆ. ಗಡಿನಾಡಿನಲ್ಲಿ ಜಾನಪದ ಸಾಂಸ್ಕøತಿಕ ಉತ್ಸವ, ಗಡಿನಾಡಿನ ಹೋರಾಟಗಾರರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಯೋಜಿಸಲಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ನಾಗೇಶ್, ಕರ್ನಾಟಕ ಟಿವಿ, ಬೆಳಗಾವಿ



