Sunday, October 5, 2025

Latest Posts

ತುಮಕೂರು ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

- Advertisement -

ತುಮಕೂರು-ಬೆಂಗಳೂರು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಇನ್ಮುಂದೆ ತುಮಕೂರು-ಬೆಂಗಳೂರು ನಡುವಿನ ಸಂಚಾರ, ತೀರಾ ಸುಲಭವಾಗಲಿದೆ. ಯಾಕಂದ್ರೆ, ಶೀಘ್ರವೇ 4 ಪಥದ ರೈಲು ಮಾರ್ಗ ನಿರ್ಮಾಣವಾಗಲಿದೆ. ಬರೋಬ್ಬರಿ 90 ಕೋಟಿ ವೆಚ್ಚದಲ್ಲಿ ತುಮಕೂರು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಅಂತಾ, ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ತುಮಕೂರು-ಬೆಂಗಳೂರು ನಡುವೆ 4 ಪಥದ ರೈಲು ಮಾರ್ಗ ನಿರ್ಮಾಣ ಮಾಡಿ, ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ. ರೈಲು ನಿಲ್ದಾಣಕ್ಕೆ ಡಾ. ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲು ಚಿಂತಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿದ್ದ 24 ರೈಲ್ವೇ ಗೇಟುಗಳನ್ನು ತೆರವುಗೊಳಿಸಿ, ಅಲ್ಲಿ ಕೆಳಸೇತುವೆ, ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕೇವಲ 2 ವರ್ಷಗಳಲ್ಲಿ ತುಮಕೂರು ಜಿಲ್ಲೆಯಲ್ಲಿ, ರೈಲ್ವೆ ಗೇಟ್‌ ಮುಕ್ತ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಅಂತಾ ವಿ. ಸೋಮಣ್ಣ ಹೇಳಿದ್ರು.

ಇನ್ನು, ತುಮಕೂರು ರೈಲು ನಿಲ್ದಾಣದಿಂದ ಬೆಂಗಳೂರಿಗೆ, ಪ್ರತಿ ದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಎಲ್ಲಾ ರೈಲುಗಳು ಯಾವಾಗಲು ರಶ್‌ ಆಗಿರುತ್ತವೆ. ಆದ್ರೆ, ರೈಲು ನಿಲ್ದಾಣಕ್ಕೆ ಅಗತ್ಯ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿತ್ತು. ಪಾರ್ಕಿಂಗ್‌ ಸಮಸ್ಯೆ, ಶೌಚಾಲಯ ಸಮಸ್ಯೆ ಹೆಚ್ಚಾಗಿತ್ತು. ಮಳೆ ಬಂದ್ರೆ ಪಾರ್ಕಿಂಗ್‌ ಜಾಗ ಕೆಸರುಗದ್ದೆಯಂತೆ ಆಗುತ್ತೆ. ಜೊತೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ. ಆದ್ರೀಗ, ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುವ ಕಾಲ ಹತ್ತಿರವಾಗ್ತಿದೆ.

- Advertisement -

Latest Posts

Don't Miss