www.karnatakatv.net: ಬೆಳಗಾವಿ: ಬುಡಾ ಅಧ್ಯಕ್ಷರಿಗೆ ಇಬ್ಬರು ಬಿಜೆಪಿ ಶಾಸಕರು ಸಹಕಾರ ಕೊಡುತ್ತಿಲ್ಲ. ಶಾಸಕರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸಭೆಗೆ ಹೋಗಲು ಬಿಡುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಕರೆದ ಸಭೆಗೆ ಬಿಜೆಪಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ ಗೈರಾದ ಕುರಿತು ಮಂಗಳವಾರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ನಾವು ಮಂಜೂರು ಮಾಡಿದ ಕೆಲಸಗಳು ಇನ್ನೂ ಪೆಂಡಿಗ್ ಇವೆ.
ಒಂದು ವರ್ಷದಿಂದ ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನ, ಸಹಾಯಧನ, ಪ್ರೋತ್ಸಾಹ ಧನ ಕಟ್ ಆಗಿದೆ. ಬುಡಾ ಅಧ್ಯಕ್ಷರಿಗೆ ಈ ಇಬ್ಬರು ಶಾಸಕರು ಸಹಕಾರ ಕೊಡುತ್ತಿಲ್ಲ. ಇದಕ್ಕೆ ಪರಿಹಾರವನ್ನು ಬಿಜೆಪಿ ಶಾಸಕರೇ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ಮೇಯರ್ ಆಗಲು ಒಂದು ವರ್ಷ ಬೇಕೆ ಬೇಕು. ಬೆಳಗಾವಿಯಲ್ಲಿ ವ್ಯವಸ್ಥೆಯೇ ಹಾಗಿದೆ. ಏನ್ ಮಾಡೊಕೆ ಆಗಲ್ಲ. ಮೇಯರ್ ಆಗಲು ಒಂದು ವರ್ಷ ಬೇಕು. ಅಧಿಕಾರ ಯಾರು ಮಾಡಬೇಕು ಅವರಿಗೆ ಸಿಗುತ್ತಿಲ್ಲ. ಪಾಲಿಕೆಯಲ್ಲಿ ಹಿಂದೆ ಕೆಲವೇ ಜನ ಅಧಿಕಾರ ನಡೆಸಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಬೆಳಗಾವಿ ಉತ್ತರ, ದಕ್ಷಿಣದಲ್ಲಿ ಓಡಾಟದ ಬಗ್ಗೆ ಮಾತನಾಡಿದ ಸತೀಶ ಜಾರಕಿಹೊಳಿ ಮುಂದಿನ ಚುನಾವಣೆಯಲ್ಲಿ ಅನುಕೂಲ ಆಗಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎರಡೂ ಕ್ಷೇತ್ರದಲ್ಲಿ ಓಡಾಟ ನಡೆಸಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ