Saturday, July 27, 2024

Latest Posts

ಶತಶೃಂಗ ಪರ್ವತದ ಅಭಿವೃದ್ಧಿಗೆ ಬದ್ದ: ಕೊತ್ತೂರು ಮಂಜುನಾಥ್

- Advertisement -

Political News: ಕೋಲಾರ: ಶತಶೃಂಗ ಪರ್ವತವನ್ನು ದೇಶದ ಗಮನ ಸೆಳೆಯುವ ರೀತಿಯಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿ, ಪರ್ವತದ ಮೇಲಿರುವ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ಅಂತರಗಂಗೆ ಬೆಟ್ಟಕ್ಕೆ ರೂಫ್‌ವೇ ನಿರ್ಮಾಣಕ್ಕೆ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಹೊರವಲಯದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ, ಡಿ.೨೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮದ ಹಿನ್ನಲೆಯಲ್ಲಿ, ತೇರಹಳ್ಳಿ ಬೆಟ್ಟದ ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು ೩.೬೦ ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.

ಈ ಬಾರಿಯ ಹುಣ್ಣಿಮೆ ಹಾಡು ಕಾರ್ಯಕ್ರಮವು, 200 ಸಂಚಿಕೆಗಳನ್ನು ಪೂರ್ಣಗೊಳಿದ ಹಿನ್ನಲೆಯಲ್ಲಿ, ತೇರಹಳ್ಳಿ ಬೆಟ್ಟದ ಆದಿಮ ಕೇಂದ್ರದಲ್ಲಿ, ದಕ್ಷಿಣ ಭಾರತ ರಾಜ್ಯಗಳ ಕಲಾ ತಂಡಗಳಿಂದ ,ಮೂರು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ತಂಡ ಆಗಮಿಸುವ ಹಿನ್ನಲೆಯಲ್ಲಿ, ತೇರಹಳ್ಳಿ ಬೆಟ್ಟದ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಅದನ್ನು ವೀಕ್ಷಿಸಿದ ಶಾಸಕ ಕೊತ್ತೂರು ಮಂಜುನಾಥ್ ೨೭ರ ಒಳಗಾಗಿ ರಸ್ತೆ ಅಗಲೀಕರಣ ಆಗಲಿದೆ ಎಂದರು.

ಇದೇ ಪ್ರಥಮ ಬಾರಿಗೆ ನಾನು ಆದಿಮ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಇದು ಶತಶೃಂಗ ಪರ್ವತ ಎಂದು ಕರೆಯಲಾಗಿದೆ. ಈ ಬೆಟ್ಟದ ಮೇಲೆ ಇರುವ ಶಿವನ ದೇವಸ್ಥಾನ ಅಭಿವೃದ್ಧಿ ಸೇರಿದಂತೆ ಇರುವ ೭ ಗ್ರಾಮಗಳ ಜನರಿಗೆ ಕುಡಿಯುವ ನೀರು ಸೇರಿದಂತೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಹಿರಿಯ ಮುಖಂಡ ಸಿ.ಎಂ ಮುನಿಯಪ್ಪ, ಆದಿಮ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಎನ್ ಮುನಿಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

- Advertisement -

Latest Posts

Don't Miss