Thursday, December 12, 2024

Latest Posts

ನಾನೇನು ನೆನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ: ಗಣೇಶ್ ಪ್ರಸಾದ್ ಗೆ ತಿರುಗೇಟು

- Advertisement -

www.karnatakatv.net :ಗುಂಡ್ಲುಪೇಟೆ: ನಿಮ್ಮ ಹಳೆಯ ಗ್ರಾಂಟ್ ನಲ್ಲಿ ಕ್ಷೇತ್ರದ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲ ಶಾಸಕನಾಗಿ ನಾನು ಆಯ್ಕೆಯಾಗಿ ಮೂರು ವರ್ಷಗಳೇ ಕಳೆದಿವೆ ಆದ್ರೂ ಸಹ ನಮ್ಮ ಅವಧಿಯಲ್ಲಿ ತಂದಂತ ಅನುದಾನಗಳು ಎಂಬ ರೀತಿಯಲ್ಲಿ ಮಾತನಾಡುತ್ತಿರುವುದು ಅವರ ರಾಜಕೀಯ ಅನುಭವವನ್ನ ತಿಳಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಗೆ ತಿರುಗೇಟು ನೀಡಿದರು.

ಕ್ಷೇತ್ರದಲ್ಲಿ ನಿಮ್ಮ ಹಳೆಯ ಗ್ರಾಂಟ್  ನಲ್ಲಿ ನಾನು ಶಾಸಕನಾಗಿ ಕೆಲ್ಸ ಮಾಡ್ತಾ ಇಲ್ಲ, ನಾನು ಶಾಸಕನಾಗಿ ಆಯ್ಕೆಯಾಗಿ ಮೂರು ವರ್ಷಗಳು ಕಳೆದಿವೆ, ಇಂತಹ ಸಂಧರ್ಭದಲ್ಲಿ ವಿಪಕ್ಷ ನಾಯಕರು ನಮ್ಮ ಅವದಿಯಲ್ಲಿ ಬಂದಂತ ಅನುದಾನದಲ್ಲಿ ಕೆಲ್ಸ ಆಗುತ್ತಿದೆ ಎಂದು ಹೇಳಿಕೆ ನೀಡಿರುವುದು ಅವರ ರಾಜಕೀಯ ಎಳಸುತನವನ್ನ ತೋರಿಸುತ್ತದೆ, ರಾಜಕಾರಣದಲ್ಲಿ ಈತರ ಆತುರದ ಮಾತುಗಳು ಬರಬಾರದು,

ನಾನೇನು ನೆನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ, ಚಿಕ್ಕಂದಿನಲ್ಲೆ ರಾಜಕಾರಣಕ್ಕೆ ಬಂದವನು, ಇವರ ಅಧಿಕಾರಾವಧಿಯಲ್ಲಿ ನಾನು ಎಲ್ಲವನ್ನು ಗಮನಿಸುತ್ತಿದೆ ಹೊರತು ಈ ರೀತಿ ಮಾತನಾಡಿಲ್ಲ, ಇವರ ತಂದೆಯವರು ಇದ್ದಾಗ ಮನೆಯಿಂದ ಹೊರ ಬರ್ತಾ ಇರಲಿಲ್ಲ ,ಕ್ಷೇತ್ರದಲ್ಲಿನ ಜನರೊಂದಿಗೆ ಒಡನಾಟ ಇರಲಿಲ್ಲ, ಈವಾಗ ರಾಜಕೀಯ ಉದ್ದೇಶದಿಂದ ಈ ರೀತಿ ಮಾತನಾಡುತ್ತಿದ್ದಾರೆ ಇದರಿಂದ ಇವರಿಗೆ ತಿಳುವಳಿಕೆ ಇಲ್ಲ ಅಂತ ಅರ್ಥ, ಜನರೊಡನೆ ಬೆರೆತು ಸಮಸ್ಯೆಗಳನ್ನು ಆಲಿಸುವ ಜೊತೆಗೆ ಇಲಾಖೆ ವಿಚಾರಗಳನ್ನು ತಿಳಿದುಕೊಳ್ಳಲಿ ಆಮೇಲೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಪ್ರಸಾದ್, ಕರ್ನಾಟಕ ಟಿವಿ- ಚಾಮರಾಜನಗರ

- Advertisement -

Latest Posts

Don't Miss