Mumbai News: ಮುಂಬೈ ಯಲ್ಲಿನ ಯೂಟ್ಯೂಬ್ ಸ್ಟಾರ್ ಒಬ್ಬರು ಇದೀಗ ಮೈಮೇಲೆ ಹಾವು ಹಲ್ಲಿ ಹರಿಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡ್ತಿದ್ದಾರೆ.
ನಟಿ, ಗಾಯಕಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಮಹರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಆಗಾಗ್ಗೆ ಜಾಲತಾಣಗಳಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡು ಸುದ್ದಿಯಾಗುತ್ತಿರುತ್ತಾರೆ.
ಇದೀಗ ಹಾವುಗಳನ್ನ ಕೈಯಲ್ಲಿ ಹಿಡಿದುಕೊಂಡ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನ ಅಚ್ಚರಿಗೊಳಿಸಿದ್ದಾರೆ. ಒಂದು ಫೋಟೋದಲ್ಲಿ ಎರಡು ವಿಭಿನ್ನ ಪ್ರಬೇಧದ ಹಾವುಗಳನ್ನ ಕೈಯಲ್ಲಿ ಹಿಡಿದು, ಮತ್ತೊಂದು ಚಿತ್ರದಲ್ಲಿ ಉಡ ಸರಿಸೃಪವನ್ನು ಕೈಮೇಲೆ ಬಿಟ್ಟುಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ʻಅತ್ಯಂತ ಅಪಾಯಕಾರಿ, ವಿಷಕಾರಿ ಮತ್ತು ಕ್ರೂರ ಪ್ರಾಣಿಗಳು ಮನುಷ್ಯರು ಮಾತ್ರ ಎಂದು ಬರೆದುಕೊಂಡಿರುವುದು ವಿಶೇಷವಾಗಿದೆ.
The most dangerous, poisonous & ferocious animals are only humans ! #FridayFeeling pic.twitter.com/qSHNuQq3Y6
— AMRUTA FADNAVIS (@fadnavis_amruta) July 14, 2023