Wednesday, August 20, 2025

Latest Posts

ಡೆವಿಲ್ ಡೈರೆಕ್ಟರ್ ನಾಪತ್ತೆ? ಮೊಬೈಲ್ ಸ್ವಿಚ್ ಆಫ್ – ಚಿತ್ರ ತಂಡಕ್ಕೆ ದೊಡ್ಡ ಶಾಕ್‌!

- Advertisement -

ಸುಪ್ರೀಂಕೋರ್ಟ್‌ನಲ್ಲಿ ಬೇಲ್ ಕ್ಯಾನ್ಸಲ್ ಆಗಿದ್ದಕ್ಕೆ ನಟ ದರ್ಶನ್ ಮತ್ತೆ ಬಂಧನ ಆಗಿದೆ. ದರ್ಶನ್ ಜೈಲು ಸೇರಿದಕ್ಕೆ ಬಹು ನಿರೀಕ್ಷಿತ ‘ಡೇವಿಲ್’ ಚಿತ್ರದ ಪ್ರಚಾರದಲ್ಲಿ ಅಡಚಣೆ ಉಂಟಾಗಿದೆ. ಜುಲೈ 15ರಂದು ಬಿಡುಗಡೆಯಾಗಬೇಕಿದ್ದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಅನ್ನೋ ಡೆವಿಲ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗದೆ ಮುಂದೂಡಲ್ಪಟ್ಟಿದೆ. ಜೊತೆಗೆ ‘ಡೆವಿಲ್’ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಕೂಡ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರಂತೆ.

ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಪ್ರಕಾಶ್ ಅವರ ಮೊಬೈಲ್, ದರ್ಶನ್ ಬಂಧನದ ನಂತರದಿಂದ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ. ಹಿರಿಯ ನಿರ್ಮಾಪಕ ಚಿನ್ನೇಗೌಡ ಈ ಬಗ್ಗೆ ಸ್ಪಂದಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಪ್ರಕಾಶ್ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರಕಾಶ್ ನನ್ನ ತಂಗಿ ಮಗ. ಚಿತ್ರದ ಶೀರ್ಷಿಕೆಯ ವಿಷಯವಾಗಿ ನಾನು ಪ್ರಾರಂಭದಲ್ಲಿ ಸಲಹೆ ನೀಡಿದ್ದೆ. ಟೈಟಲ್ ಸೂಕ್ತವಾಗಿದೆ ಎಂದು ತಿಳಿಸಿದ್ದೆ. ಆದರೆ ಈಗಿನ ಸ್ಥಿತಿಗತಿಯ ಬಗ್ಗೆ ನಾನು ಇನ್ನೆನೂ ಮಾತನಾಡಿಲ್ಲ. ದರ್ಶನ್‌ ಬಂಧನದಿಂದಾಗಿ ಚಿತ್ರದ ಹಾಡು ಬಿಡುಗಡೆ ಇಲ್ಲದಿರುವುದು ದುಃಖದ ವಿಷಯ ಎಂದು ಚಿನ್ನೇಗೌಡ ತಿಳಿಸಿದ್ದಾರೆ.

ದರ್ಶನ್ ಬಂಧನದ ಹಿನ್ನೆಲೆಯಲ್ಲಿ ಚಿತ್ರತಂಡದ ಭವಿಷ್ಯದ ಪ್ರಚಾರ ಚಟುವಟಿಕೆಗಳು ಅನಿಶ್ಚಿತವಾಗಿವೆ. ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ. ದರ್ಶನ್‌ ಅಭಿಮಾನಿಗಳು ಈ ಬೆಳವಣಿಗೆಯಿಂದ ನಿರಾಸೆಗೊಂಡಿದ್ದಾರೆ. ನ್ಯಾಯಾಲಯದಿಂದ ಜಾಮೀನಿಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದರಿಂದ, ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿನ್ನೇಗೌಡ್ರು ಈ ಕುರಿತು ಪ್ರತಿಕ್ರಿಯಿಸುತ್ತಾ, ದರ್ಶನ್, ತೂಗುದೀಪ ಶ್ರೀನಿವಾಸ್ ಹಾಗೂ ಮೀನಾ ಒಳ್ಳೆಯ ವ್ಯಕ್ತಿಗಳು. ದರ್ಶನ್ ಬಾಲ್ಯದಿಂದ ಮುದ್ದಾಗಿ ಬೆಳೆದಿದ್ದಾನೆ. ನಮಗೆ ಗೌರವ ನೀಡುತ್ತಿದ್ದ. ಆದರೆ ಕಾನೂನಿಗಿಂತ ಯಾರೂ ಮೇಲಲ್ಲ. ಕಾನೂನಿಗೆ ತಲೆ ಬಾಗಲೇಬೇಕು ಎಂದು ಹೇಳಿದ್ದಾರೆ. ಪ್ರಸ್ತುತ, ‘ಡೇವಿಲ್’ ಚಿತ್ರದ ಬಗ್ಗೆ ಮುಂದಿನ ನಿರ್ಧಾರಗಳು ನಿರ್ಮಾಪಕರ ಸ್ಪಷ್ಟಪಡಿಸುವುದನ್ನು ನಿರೀಕ್ಷಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss