Saturday, September 21, 2024

Latest Posts

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

- Advertisement -

Devotional :

ಹಿಂದೂ ಪಂಚಾಂಗದ ಪ್ರಕಾರ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನಮಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ, ಇದು ಮಾರ್ಘಶಿರ ಮಾಸದ ಆಚರಣೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮಾರ್ಗಶಿರ ಮಾಸವನ್ನು ವರ್ಣಿಸಿದ್ದಾನೆ.

ಸೂರ್ಯನು ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ ಮಾಸ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ದೈವ ಕಾರ್ಯಗಳಿಗೆ ಶ್ರೇಷ್ಠ ಎಂದು ಪರಿಗಣಿಸಲಾಗಿದೆ, ಶುಭ ಕಾರ್ಯಗಳನ್ನು ಮಾಡುವುದಕ್ಕೆ ಇದು ಶ್ರೇಷ್ಠವಾದ ಮಾಸವಲ್ಲ ಬದಲಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನೂ ಈ ಮಾಸದಲ್ಲಿ ಮಾಡಲಾಗುತ್ತದೆ ಇದನ್ನು ಶೂನ್ಯ ಮಾಸ ಎಂದೂ ಸಹ ಕರೆಯುತ್ತಾರೆ .

ಧನುರ್ಮಾಸದಲ್ಲಿ ಶುಭಕಾರ್ಯಗಳಿಗೆ ಏಕೆ ಶ್ರೇಶ್ಠವಲ್ಲ..?ಶುಭಕಾರ್ಯಗಳು ಏಕೆ ಮಾಡಲಾಗುವುದಿಲ್ಲ..?

ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದಾರೆ ನಮ್ಮ ಕಾಲ ಗಣನೆಗೂ ಹಾಗೂ ದೇವತೆಗಳ ಕಾಲಗಣನೆಗೂ ಬಹಳ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.

ಈ ಮಾಸದಲ್ಲಿ ವಿಷ್ಣುವಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳಿವೆ. ಈ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನ, ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವುದು, ಭವಬಂಧನಗಳಿಂದ ಮನಸ್ಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಕರೆಯುತ್ತಾರೆ. ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ. ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪಾವಾಸವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ ಎಂದೂ ಕರೆಯುತ್ತಾರೆ, ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

ವೈಕುಂಠ ಚತುರ್ದಶಿ ದಿನ ವಿಷ್ಣುವಿನ ಆರಾಧನೆಗೆ ಮುಖ್ಯವಾದ ದಿನ ಏಕೆ …?

ಕಲ್ಮಷವಿಲ್ಲದ ಭಕ್ತಿ…!

ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!

 

- Advertisement -

Latest Posts

Don't Miss