Sunday, December 22, 2024

Latest Posts

love story: ಕರುಳಕುಡಿಗಾಗಿ ಕರುಳಿಗೆ ಚಾಕು ಹಾಕಿದ ಅಪ್ಪ….!

- Advertisement -

ಧಾರವಾಡ: ಪ್ರೀತಿ ಮಾಡಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಇಲ್ಲೊಬ್ಬ ಯುವಕ ತಲುಪಿದ್ದಾನೆ. ತನ್ನ ಮಗಳನ್ನ ಪ್ರೀತಿಸುತ್ತಿದ್ದ ಯುವಕನಿಗೆ ತಂದೆಯೋರ್ವ ಚಾಕು ಇರಿದ ಘಟನೆ ಧಾರವಾಡದ ಸೈದಾಪುರದಲ್ಲಿ ಈಗಷ್ಟೇ ನಡೆದಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೈದಾಪುರ ಗೌಡರ ಓಣಿಯ ಶಶಾಂಕ ಮೂಗನ್ನವರ ಎಂಬ ಯುವಕನಿಗೆ ಸುತಗಟ್ಟಿ ಚಾಳನ ಹುಲಗಪ್ಪ ಬಡಿಗೇರ ಎಂಬಾತ ಚಾಕುವಿನಿಂದ ಇರಿದಿದ್ದು, ಕರುಳು ಹೊರಬಂದಿವೆ.

ಕಳೆದ ಒಂದೂವರೆ ವರ್ಷದಿಂದ ಶಶಾಂಕ, ಹುಲಗಪ್ಪನ ಮಗಳನ್ನ ಪ್ರೀತಿಸುತ್ತಿದ್ದ. ಇದರಿಂದ ರೋಸಿ ಹೋಗಿ ಹೀಗೆ ಮಾಡಿದ್ದಾನೆಂದು ಹೇಳಲಾಗಿದೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.

Cemetery: ಮಾದಿಗ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ರುದ್ರ ಭೂಮಿಯೇ ಇಲ್ಲಾ

Akhilesh Yadav : ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಸ್ವಾಗತಿಸಿದ ಲಕ್ಷ್ಮೀ ಹೆಬ್ಬಾಳ್ಕರ್

Rahul Gandhi : ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕಾಂಗ್ರೆಸ್ ನಾಯಕರು

- Advertisement -

Latest Posts

Don't Miss