ಧಾರವಾಡ: ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧಾರವಾಡದ ಕಿರಣ ಗೆಳೆಯರ ಬಳಗದ ಸುಮಾರು 40ಕ್ಕೂ ಹೆಚ್ಚು ಸದಸ್ಯರು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಭಾನುವಾರ ಪಾದಯಾತ್ರೆ ಕೈಗೊಂಡು ಸೋಮವಾರ ಬೆಳಿಗ್ಗೆ ವಿಶೇಷ ಅಭಿಷೇಕ ಮಾಡಿಸಿದರು.
ಪಾದಯಾತ್ರೆಗೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಹುಬ್ಬಳ್ಳಿಯ ಉಣಕಲ್ ಬಳಿ ಸ್ವಾಗತಿಸಿ ಶುಭಕೋರಿದರು. ಭಾನುವಾರ ಸಂಜೆ 7.15ರ ಸುಮಾರಿಗೆ ಎನ್‌ಟಿಟಿಎಫ್ ಹತ್ತಿರದ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಮದ್ಯ ರಾತ್ರಿ ಸುಮಾರಿಗೆ ಸಿದ್ಧಾರೂಢ ಮಠಕ್ಕೆ ಆಗಮಿಸಿ ವಿಶೇಷ ಅಭಿಷೇಕ ಮಾಡಿಸಿದರು.
ತಮ್ಮ ತಮ್ಮ ಉದ್ಯೋಗಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಧಾರವಾಡದ ಕಿರಣ ಗೆಳೆಯರ ಬಳಗದ ಸದಸ್ಯರು ಪ್ರತಿವರ್ಷ ಶ್ರಾವಣದ ಕೊನೆಯ ಸೋಮವಾರದಂದು ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸುತ್ತಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಧ್ಯೆ ಬರುವ ಎಲ್ಲ ದೇವಸ್ಥಾನ, ದರ್ಗಾ, ಚರ್ಚ್‌ಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಬಳಗದ ಕಿರಣ ಹಾವಣಗಿ, ಕಿಶೋರ, ವಿನಯ ಮಹೇಂದ್ರಕರ್, ಕುಮಾರ ಚಿನಿವಾಲ, ವಿನಯ ಶಿಂಧೆ, ಸತೀಶ ವೀರಾಪುರ, ರಾಜು ಸಜ್ಜನ, ಸಂಜೀವ ಕಡಕೋಳ, ಶರದ ಟಿಕಾರೆ, ಸತೀಶ ಹೆಗಡೆ, ಕೃಷ್ಣಾ ಹಲಕಿ, ಡಾ.ಕಿರಣ ಬೆಲ್ಲದ, ತುರಾಬ ಮೈಸೂರ, ವಿಶ್ವನಾಥ ನಡಕಟ್ಟಿ, ವೃಷಭ ಹಿರೇಮಠ, ಶಿಂಧೆ ಕಾಕಾ, ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಅನೇಕ ಸದಸ್ಯರು, ಯುವಕರು, ಮಕ್ಕಳು, ಮಹಿಳೆಯರು ಪಾಲ್ಗೊಂಡಿದ್ದರು.
Kaveri water: ಕೇಂದ್ರ ಜಲಶಕ್ತಿ ಸಚಿವರಿಗೆ ಕಾವೇರಿ ವಸ್ತುಸ್ಥಿತಿ ಮನವರಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್
Post Office: ವಿಮಾ ಅರ್ಜಿ ತಿರಸ್ಕರಿಸಿದ ಅಂಚೆ ಇಲಾಖೆಗೆ ಗ್ರಾಹಕರ ಆಯೋಗ ದಂಡ..!

