Thursday, August 21, 2025

Latest Posts

ಧರ್ಮಸ್ಥಳ ಪ್ರಕರಣ ರಣರೋಚಕ ತಿರುವು : ಹೊಸ ಸಾಕ್ಷಿದಾರನ ಎಂಟ್ರಿ

- Advertisement -

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅನಾಮಿಕನೊಬ್ಬ ಧರ್ಮಸ್ಥಳದಲ್ಲಿ ಸುಮಾರು ಎರಡು ದಶಕಗಳಿಂದ ನೂರಾರು ಶವಗಳನ್ನು ಹೂಳಲಾಗಿದೆ ಸರ್​. ಬನ್ನಿ ಸರ್​ ನಾನು ಜಾಗ ತೋರಿಸ್ತೀನಿ ಅಂತ ಹೇಳಿದ್ದ. ಪೊಲೀಸರನ್ನ ಕರ್ಕೊಂಡು.. ಸರ್​ ಅಲ್ಲಿ.. ಸರ್​ ಇಲ್ಲಿ ಅಂತ ಹೂತಿಟ್ಟ ಜಾಗವನ್ನ ತೋರಿಸಿದ್ದ. ಇದರ ನಡುವೆ ಎಸ್‌ಐಟಿ ಮುಂದೆ ಮತ್ತೋರ್ವ ಹಾಜರಾಗಿರೋದು ಅನುಮಾನಗಳಿಗೆ ಮತ್ತೊಂದು​​​ ಬಿಗ್​​ ಟ್ವಿಸ್ಟ್​​ ಕೊಟ್ಟಿದೆ.

ಅನಾಮಧೇಯ ವ್ಯಕ್ತಿಯನ್ನ ಜೊತೆಯಲ್ಲಿ ಹಾಕ್ಕೊಂಡು ಕಾಡುಮೇಡು ಅಂತ ನೋಡದೆ ಜೆಸಿಬಿ, ಹಿಟಾಚಿ, ದಿನಗೂಲಿನಗಳನ್ನ ಕರೆದುಕೊಂಡು ಎಸ್​ಐಟಿ ತಂಡ 13 ಜಾಗಗಳ ಪೈಕಿ 9 ಪಾಯಿಂಟ್​ನಲ್ಲಿ ಶೋಧ ಕಾರ್ಯಗಳನ್ನ ಪೂರ್ಣಗೊಳಿಸಿದೆ. ಮೊದಲ ಐದು ಸೈಟ್‌ಗಳಲ್ಲಿ ಮನುಷ್ಯರ ಯಾವುದೇ ಅವಶೇಷಗಳು ದೊರೆತಿರಲಿಲ್ಲ. ಆದರೆ, ಆರನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಸಿಕ್ಕಿದೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದರೆ, ನಿನ್ನೆ ಸಂಜೆ ಬೆಳ್ತಂಗಡಿಯಲ್ಲಿ ಹೊಸ ಸಾಕ್ಷಿಯೊಬ್ಬರು ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಹೊಸ ಕಥೆ ಹೇಳಿದ್ದಾರೆ.
ಸರ್, ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವ. ಆ ನೋವು, ಅದು ಯಾರೋ, ಏನೋ ನಮಗೆ ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅದು ತನಿಖೆ ಆಗಬೇಕು. ಎಸ್​ಐಟಿ ಮೇಲೆ ಒಂದು ನಂಬಿಕೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಒಂದು ಪದ್ಮಲತಾ, ಇವತ್ತಿಗೂ ನ್ಯಾಯ ಸಿಗಲಿಲ್ಲ. ಅದರ ಬಗ್ಗೆಯೂ ನಾವು ದೂರು ನೀಡುತ್ತಿದ್ದೇವೆ. ಅದೇ ರೀತಿ ಸಂತೋಷ್, ಚಾರ್ಮಾಡಿಯಲ್ಲಿ. ಅದು ಕೂಡ ನನ್ನ ಕುಟುಂಬದವರೇ, ಅದಕ್ಕೂ ನ್ಯಾಯ ಸಿಗಲಿಲ್ಲ. ಇದಕ್ಕಾದರೂ ಸಿಗಬಹುದಾ ಅಂತಾ ನೋಡುತ್ತಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಇಚಿಲಂಪಾಡಿ ನಿವಾಸಿ ಜಯನ್ 15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾವನ್ನಪ್ಪಿರೋ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸಾವಿಗೀಡಾದ 15 ವರ್ಷದ ಬಾಲಕಿಯನ್ನ ಕಾನೂನು ಪ್ರಕ್ರಿಯೆ ನಡೆಸದೇ ಹೂತು ಹಾಕಲಾಗಿದೆ. ಸೌಜನ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ದೂರುದಾರ ಜಯನ್ ಟಿ, ತನಿಖಾಧಿಕಾರಿಗಳಿಗೆ ಜಾಗ ತೋರಿಸಲು ಸಿದ್ಧ ಎಂದು ಮುಂದೆ ಬಂದಿದ್ದಾರೆ. ಹೆಣ್ಣು ಮಗಳ ಶವವನ್ನ ಧರ್ಮಸ್ಥಳ ಗ್ರಾಮದಲ್ಲಿ ಹೂಳಲಾಗಿದೆ, ಜಾಗ ಗೊತ್ತಿದೆ. ನಾನು ಅದಕ್ಕೆ ಪ್ರತ್ಯಕ್ಷದರ್ಶಿ ಎಂದಿದ್ದಾರೆ. ದೂರು ಕೊಟ್ಟು SIT ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡ್ತೀನಿ ನ್ಯಾಯದ ನಂಬಿಕೆ ಇದೆ ಎಂದು ದೂರುದಾರ ಹೇಳಿದ್ದಾರೆ.

ಸದ್ಯ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪರಿಶೋಧನೆ ಕಾರ್ಯಾಚರಣೆಗೆ ಇಂದು ಬ್ರೇಕ್​ ಕೊಡಲಾಗಿದೆ. ಇಂದು ಭಾನುವಾರ ಸರ್ಕಾರಿ ರಜಾ ದಿನ ಆದ ಕಾರಣ ಇಲಾಖಾ ಅಧಿಕಾರಿಗಳಿಗೆ ರೆಸ್ಟ್​ ನೀಡಲಾಗಿದೆ. ಸೋಮವಾರದಿಂದ ಪರಿಶೋಧನೆ ಪ್ರಕ್ರಿಯೆ ಮುಂದುವರಿಯಲಿದೆ. ಹೊಸ ಸಾಕ್ಷಿಯ ದೂರು ಮತ್ತು ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ. ನಾಳೆ ಅಂದ್ರೆ ಸೋಮವಾರ ದೂರುದಾರ ಜಯನ್ ಅವರಿಂದ 15 ವರ್ಷದ ಬಾಲಕಿಯ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss