ಧರ್ಮಸ್ಥಳ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ಗುರುವಾರ 3,923 ಪುಟಗಳ ತನಿಖಾ ವರದಿ ಸಲ್ಲಿಸಿದೆ. ವರದಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ತಯಾರಿಸಲಾಗಿದೆ ಮತ್ತು ಆರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಅನ್ನು ಕೋರ್ಟ್‌ಗೆ ನೀಡಲಾಗಿದೆ.
5 ತಿಂಗಳ ತನಿಖೆಯ ಬಳಿಕ ಸಲ್ಲಿಸಲಾದ ವರದಿಯಲ್ಲಿ ಉತ್ಖನನ ಹಾಗೂ ಪ್ರತ್ಯಕ್ಷದರ್ಶಿಗಳ ಸಾಕ್ಷಿಗಳನ್ನು ಒಳಗೊಂಡಿದೆ. ಚಿನ್ನಯ್ಯ ಬಂಧನದ ನಂತರ 90 ದಿನದೊಳಗೆ ವರದಿ ಸಲ್ಲಿಸುವ ನಿಯಮದಂತೆ ವರದಿ ಕೋರ್ಟ್‌ಗೆ ನೀಡಲಾಗಿದೆ.
ಆದರೆ ಸಂಪೂರ್ಣ ತನಿಖೆ ಮಾಡಲು ಎಸ್‌ಐಟಿಗೆ ಸಾಧ್ಯವಾಗಿಲ್ಲ. ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಸಾಕ್ಷ್ಯಗಳ ಕುರುಹು ಸಿಕ್ಕಿಲ್ಲ. ಆದ್ದರಿಂದ ಷಡ್ಯಂತ್ರದ ಸಾಧ್ಯತೆಯನ್ನು ಗಮನಿಸಿ ಬಂಧನದ ವೇಳೆ ಆತ ನೀಡಿದ ಹೇಳಿಕೆಗಳನ್ನು ವರದಿಯಲ್ಲಿ ಸೇರಿಸಲಾಗಿದೆ.
ಪ್ರಕರಣದ ಈವರೆಗೂ ನಡೆದತಂಹ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. ಚಿನ್ನಯ್ಯ ಬಂಧನದ ಬಳಿಕ 90 ದಿನದಲ್ಲಿ ವರದಿ ಸಲ್ಲಿಕೆ ಮಾಡಬೇಕೆಂಬ ನಿಯಮವಿದೆ. ಆ ಹಿನ್ನೆಲೆಯಲ್ಲಿ ಇಂದು ಎಸ್‌ಐಟಿ ಅವರು ತನಿಖಾ ವರದಿ ಸಲ್ಲಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

