Film News : ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಸ್ನೇಹಿತರ ಜೊತೆ ಯುಕೆ ಗೆ ಹಾರಿದ್ರು ಕಾಟೇರ ಚಿತ್ರದ ಬಿಡುವಿನಲ್ಲಿ ದಚ್ಚು ಫ್ರೆಂಡ್ಸ್ ಜೊತೆ ಜಾಲಿ ಮೂಡ್ ನಲ್ಲಿದ್ದಾರೆ. ಅಷ್ಟೇ ಅಲ್ಲ ಅಲ್ಲಿನ ಕನ್ನಡಿಗರಿಗೂ ಸೆಲ್ಫಿ ಭಾಗ್ಯ ನೀಡಿದ್ದಾರೆ. ಹಾಗಿದ್ರೆ ಹೇಗಿತ್ತು ದಚ್ಚು ಸ್ನೇಹಿತರ ಜೊತೆಗಿನ ಜಾಲಿ ಟ್ರಿಪ್ ಹೇಳ್ತೀವಿ ಈ ಸ್ಟೋರಿಯಲ್ಲಿ…………
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದರು. ಕಾಟೇರ ಚಿತ್ರದ ಬಿಡು ವಿನಲ್ಲಿ ಕಾಲು ನೋವಿದ್ದರೂ ಯುಕೆ ಗೆ ಹಾರಿದ ದರ್ಶನ್ ಇದೀಗ ಜಾಲಿ ಮೂಡ್ ನಲ್ಲಿದ್ದಾರೆ. ಸ್ನೇಹಿತರ ಜೊತೆ ಕಳೆದ 5 ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ಬ್ರಿಟನ್‌ನಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಿಕ್ಕ ಕನ್ನಡ ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಕಳೆದ ವಾರವಷ್ಟೆ ದರ್ಶನ್ ಕಾಲಿಗೆ ಪೆಟ್ಟಾಗಿತ್ತು. ಕುಂಟುತ್ತಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ನಮ್ ಬಾಸ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು ಕೂಡಾ. ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂದು ಮರುದಿನವೇ ಮತ್ತೆ ‘ಕಾಟೇರ’ ಸೆಟ್‌ಗೆ ಹೋಗಿದ್ದರು. ಅದರ ಬೆನ್ನಲ್ಲೇ ಮಂಗಳವಾರ ದರ್ಶನ್ ಬ್ರಿಟನ್ ಕಡೆ ಹೊರಟರು. ಬ್ರಿಟನ್‌ನ ಪ್ರಮುಖ ಜಾಗಗಳಲ್ಲಿ ದರ್ಶನ್ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಇದೀಗ ಫುಲ್ ವೈರಲ್ ಆಗುತ್ತಿದೆ.
ಯುಕೆ ಟವರ್ ಬ್ರಿಡ್ಜ್, ಕಾರ್ನಬಿ ಮುಂಭಾಗದಲ್ಲಿ ಹೀಗೆ ಹಲವು ಜಾಗಗಳಲ್ಲಿ ದರ್ಶನ್ ಕಾಲ ಕಳೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್‌ಗೆ ಸ್ನೇಹಿತರಾದ ಸಚ್ಚಿದಾನಂದ ಸೇರಿದಂತೆ ಮತ್ತಿಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದಾರೆ.
ಇನ್ನು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ್ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳನ್ನು ಇದೀಗ ವೈರಲ್ ಆಗುತ್ತಿವೆ. ಮತ್ತೊಂದು ಕಡೆ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಮತ್ತೆ ಬಾಕ್ಸಾಫೀಸ್ ಸುಲ್ತಾನ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಇನ್ನು ಬಹು ನಿರೀಕ್ಷೆಯ ಕಾಟೇರ ಚಿತ್ರ ದಸರಾಗೆ ತೆರೆ ಮೇಲೆ ಬರಲಿದೆ. ತರುಣ್ ಸುದೀರ್ ನಿರ್ದೇಶನದ ಈ ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ ವಿ ಹರಿಕೃಷ್ಣ ಸಂಗೀತ , ಮಾಸ್ತಿ ಸಂಭಾಷಣೆ ಇದೆ. ಇನ್ನೂ ದಸರಾಕ್ಕೂ ಮುನ್ನ ವರಮಹಾಲಕ್ಷ್ಮೀ ಇಲ್ಲ ಗಣೇಶನ ಹಬ್ಬಕ್ಕೆ ಸ್ಪೆಷಲ್ ಪೋಸ್ಟರ್ ಕೂಡಾ ರಿಲೀಸ್ ಆಗುವ ಸಾಧ್ಯತೆ ಇದೆ.
ಟೈಟಲ್‌ನಿಂದಲೇ ‘ಕಾಟೇರ’ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ 70ರ ದಶಕದ ಕಥೆ ಹೇಳಲಾಗುತ್ತಿದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ತರುಣ್ ಹಾಗೂ ಜಡೇಶ್ ಹಂಪಿ ಈ ಕಥೆ ಮಾಡಿದ್ದಾರೆ. ಉಳುವವನೇ ಭೂಮಿಕ ಒಡೆಯ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳ ಹಿನ್ನೆಲೆ ‘ಕಾಟೇರ’ನ ಕಥೆ ಸಾಗಲಿದೆ.
Kiccha Sudeep : ತಿರುಪತಿಯಲ್ಲಿ ಕಿಚ್ಚ …! ವಿವಾದದ ನಡುವೆ ನಿರಾಳತೆಯ ನಡೆ..!